ಮಡಿಕೇರಿ: ತುಂಬಾ ಸಂಭ್ರಮ ಹಾಗೂ ಸಡಗರದಿಂದ ನಡೆಯುತ್ತಿದ್ದ ಮಂಜಿನನಗರಿ ಮಡಿಕೇರಿ ದಸರಾ ಜನೋತ್ಸವವನ್ನು ಈ ಬಾರಿ ಅತ್ಯಂತ ಸರಳವಾಗಿ ಆಚರಿಸಲಾಗಿದ್ದು, ದಶ ಮಂಟಪಗಳ ಮೆರವಣಿಗೆ ಕಣ್ಮನ ಸೆಳೆಯಿತು.
Advertisement
ಪ್ರತಿ ವರ್ಷ ಡಿಜೆ ಸೌಂಡ್ ನ ಅಬ್ಬರ ಈ ಬಾರಿ ಇರಲಿಲ್ಲ. ಬೆಳಕಿನ ಓಕುಳಿಯಲ್ಲಿ ಮಿಂದೆದ್ದು ಜೀವ ಪಡೆಯುತ್ತಿದ್ದ ದೇವಾನುದೇವತೆಗಳು ಮತ್ತು ರಾಕ್ಷಸರ ನಡುವೆ ನಡೆಯುತ್ತಿದ್ದ ಕಾಳಗವೂ ಇರಲಿಲ್ಲ. ಬದಲಾಗಿ ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳು ಸೇರಿದಂತೆ ಒಟ್ಟು ಹತ್ತು ದೇವಾಲಯಗಳ ಹತ್ತು ಮಂಟಪಗಳ ಮೆರವಣಿಗೆಗಳು ಈ ಬಾರಿ ಅತ್ಯಂತ ಸರಳ ರೀತಿಯಲ್ಲಿ ನಡೆಯಿತು.
Advertisement
Advertisement
ರಾತ್ರಿ 9 ಗಂಟೆಗೆ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ದಶಮಂಟಪಗಳು ಸಾಗಿಬಂದವು. ಈ ಬಾರಿ ರಾತ್ರಿ 12 ಗಂಟೆ ಒಳಗೆ ಮೆರವಣಿಗೆ ಅಂತ್ಯಗೊಳಿಸಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನಿಂದ ಅದೇಶ ನೀಡಿದ ಹಿನ್ನೆಲೆ ಮಂಟಪಗಳು ಮೆರವಣಿಗೆಗೆ ಹೊರಡಲು ಆಯಾ ದೇವಾಲಯಗಳ ಮುಂಭಾಗ ಸಿದ್ಧಗೊಳಿಸಲಾಗಿತ್ತು. ಸಮಯಕ್ಕೆ ಸರಿಯಾಗಿ ಮೆರವಣಿಗೆಯನ್ನು ಆರಂಭಿಸಲಾಯಿತು.
Advertisement
ಪ್ರತಿ ವರ್ಷದಂತೆ ಈ ವರ್ಷ ಬೆಳಗ್ಗಿನ ಜಾವದಲ್ಲಿ ಬನ್ನಿ ಕಡಿಯುವುದಿಲ್ಲ. ಬದಲಾಗಿ 12 ಗಂಟೆ ಒಳಗೆ ಅದನ್ನೂ ಮುಗಿಸಲಾಗಿದೆ. ಒಟ್ಟಿನಲ್ಲಿ ಸೀಮಿತ ಸಮಯದಲ್ಲಿ ಎಲ್ಲವನ್ನೂ ಮುಗಿಸಲಾಗಿದ್ದು, 10 ಮಂಟಪಗಳ ಮೆರವಣಿಗೆ ಕಣ್ಮನ ಸೆಳೆಯಿತು. ನಗರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಆದರೆ ಮಡಿಕೇರಿ ನಗರದ ಜನತೆ ಮಾತ್ರ ಹೊರ ಬರಲಿಲ್ಲ. ಕೆಲವೇ ಜನ ಮೆರವಣಿಹೆಯಲ್ಲಿ ಭಾಗವಹಿಸಿದ್ದರು.