ಮಡಿಕೇರಿ: ಮಡಿಕೇರಿ ನಗರದಲ್ಲಿ ಡ್ರಗ್ಸ್ ಮತ್ತು ಗಾಂಜಾ ದಂಧೆ ನಡೆಸುತ್ತಿದ್ದ ಐವರು ಆರೋಪಿಗಳನ್ನು ಪತ್ತೆ ಹಚ್ಚಿ ಮಡಿಕೇರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದನ್ನು ಓದಿ: 8 ವರ್ಷಗಳಿಂದ ಭಟ್ಕಳದಲ್ಲಿ ಅಕ್ರಮವಾಗಿ ವಾಸವಿದ್ದ ಪಾಕಿಸ್ತಾನಿ ಮಹಿಳೆ ಅರೆಸ್ಟ್
ಮಡಿಕೇರಿ ತಾಲೂಕಿನ ನಾಪೋಕ್ಲು ಕೊಟ್ಟಮುಡಿ ನಿವಾಸಿ, ಬಿ.ಬಿ.ಎಂ. ವಿದ್ಯಾರ್ಥಿ ಮೊಹಮ್ಮದ್ ಅಸ್ಲಾಂ ಕೆ.ಹೆಚ್ (23), ಬೇತು ಗ್ರಾಮದ ನಿವಾಸಿ ಹೆಚ್.ಆರ್.ಡಿ. ವಿದ್ಯಾರ್ಥಿ ಬೋಪಣ್ಣ ಕೆ.ಕೆ. (22), ಇದೇ ಗ್ರಾಮದ ನಿವಾಸಿ ಕೃಷಿಕ ಅಕ್ಷಿತ್ ಸಿ.ಸಿ. (24), ಮಡಿಕೇರಿ ನಗರದ ಚೈನ್ ಗೇಟ್ ನಿವಾಸಿ ಬ್ಯಾಂಕ್ ನಲ್ಲಿ ನಿರ್ವಹಣೆ ಕೆಲಸ ಮಾಡುವ ಸುಮಂತ್ ಅಣ್ಣು (22) ಹಾಗೂ ಪುಟಾಣಿ ನಗರದ ನಿವಾಸಿ ಪೇಯಿಂಟಿಂಗ್ ಕೆಲಸ ಮಾಡುವ ರಾಜೇಶ್ (22) ಬಂಧಿತ ಆರೋಪಿಗಳು.
ಡ್ರಗ್ಸ್ ಮತ್ತು ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚೈನ್ ಗೇಟ್ ಬಳಿಯ ಡಿ.ಎಫ್.ಓ, ಬಂಗ್ಲೆ ಬಳಿ ಐವರು ಚರ್ಚೆ ನಡೆಸುತ್ತಿದ್ದ ಸಂದರ್ಭ ಪೊಲೀಸರು ದಾಳಿ ಮಾಡಿ ಮಾಲು ಸಹಿತ ಐವರನ್ನು ಬಂಧಿಸಿದ್ದಾರೆ.
ಒಟ್ಟು 1.26 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳಾದ 750 ಗ್ರಾಂ ಗಾಂಜಾ, 11.970 AMPHETAMINE, 0.800 ಮಿಲಿ ಗ್ರಾಂ- ECSTASY ಹಾಗೂ ಎರಡು ದ್ವಿ-ಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನು ಓದಿ: ಲಾಕ್‍ಡೌನ್ ವೇಳೆ ಅಂಗಡಿಗಳಿಗೆ ಕನ್ನ ಹಾಕುತಿದ್ದ ಖದೀಮರ ಬಂಧನ