ಮಡಿಕೇರಿ: ಡೆಡ್ಲಿ ಕೊರೊನಾ ವೈರಸ್ ಬರದಂತೆ ಎಚ್ಚರಿಕೆ ವಹಿಸುವುದು ಹರಸಾಹಸ ಎನ್ನುವಂತಾಗಿದ್ದು, ಎಲ್ಲೂ ಹೋಗದೆ ಮನೆಯಲ್ಲೇ ಇದ್ದ ಎಷ್ಟೋ ಜನರಿಗೆ ಗೊತ್ತಾಗದಂತೆ ವೈರಸ್ ತಗುರಲಿದ ಉದಾಹರಣೆಗಳುನ ಸಹ ಇವೆ. ಹೀಗಾಗಿ ಮಡಿಕೇರಿಯಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತಿದೆ.
Advertisement
ಪ್ರತಿ ನಿತ್ಯ ಕೊರೊನಾ ಹಾಟ್‍ಸ್ಪಾಟ್ ಬೆಂಗಳೂರಿಗೆ ಹೋಗಿ ಬರುತ್ತಿರುವವರಿಗೆ ಕೊರೊನಾ ಇದೆಯೋ ಇಲ್ಲವೋ ಎಂಬುದು ತಿಳಿಯುವುದಿಲ್ಲ. ಲಾಕ್‍ಡೌನ್ ಸಡಿಲಗೊಂಡ ಬಳಿಕ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದ್ದು, ಮಡಿಕೇರಿ ಘಟಕದಿಂದಲೂ ಹತ್ತಾರು ಬಸ್ ಗಳು ಬೆಂಗಳೂರಿಗೆ ಹೋಗಿ ಬರುತ್ತಿವೆ. ಹೀಗಾಗಿ ಕೊಡಗು ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಇಂದಿನಿಂದ ಕೊರೊನಾ ಚೆಕ್‍ಅಪ್ ಮಾಡಲಾಗುತ್ತಿದೆ.
Advertisement
ಮಡಿಕೇರಿ ಡಿಪೋದಲ್ಲಿ 486 ಸಿಬ್ಬಂದಿ ಇದ್ದು, ಅವರೆಲ್ಲರಿಗೂ ಕೊರೊನಾ ಚೆಕ್ ಮಾಡಲಾಗುತ್ತಿದೆ. ಎಲ್ಲರ ಗಂಟಲು ದ್ರವ ಸಂಗ್ರಹಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಅಷ್ಟೂ ಜನರಿಗೆ ಕೊರೊನಾ ಇದೆಯೋ, ಇಲ್ಲವೋ ಎಂದು ಪರೀಕ್ಷಿಸಲಿದೆ. ಅದರಲ್ಲೂ ಡಿಪೋದ ಒಬ್ಬ ಸಿಬ್ಬಂದಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಈಗಾಗಲೇ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ.
Advertisement
Advertisement
ಇವರ ವರದಿ ಇನ್ನೂ ಬರಬೇಕಿದ್ದು, ವರದಿಗಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಸಿಬ್ಬಂದಿ ಆತಂಕದಿಂದಲೇ ಕಾಯುತ್ತಿದ್ದಾರೆ. ಬುಧವಾರದಿಂದ ಬೆಂಗಳೂರಿಗೆ ಹೋಗಿ ಬರುತ್ತಿರುವ ಸಿಬ್ಬಂದಿ ಜೊತೆ ಸ್ಥಳೀಯ ಸಿಬ್ಬಂದಿ ಸಹ ಕೊರೊನಾ ಪರೀಕ್ಷೆಗೆ ಒಳಪಡುತ್ತಿದ್ದಾರೆ.