ಮಡದಿ ಮಾತಿಗೆ ತಲೆಯಾಡಿಸಿ ನಸು ನಕ್ಕ ಅಭಿಮನ್ಯು

Public TV
2 Min Read
nikhil

ಬೆಂಗಳೂರು: ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದು, ಆಗಾಗ ತಮ್ಮ ಮಡದಿಯೊಂದಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ನಿಖಿಲ್ ತಮ್ಮ ಪತ್ನಿಯ ಮಾತಿಗೆ ತಲೆಯಾಡಿಸಿ ನಸು ನಕ್ಕಿದ್ದಾರೆ. ಇದನ್ನೂ ಓದಿ: ಮಡದಿ ಅಡುಗೆ ಮಾಡುವ ವಿಡಿಯೋ ಹಂಚಿಕೊಂಡ ನಿಖಿಲ್

nikhilgowd

ನಟ ನಿಖಿಲ್ ಇನ್‍ಸ್ಟಾಗ್ರಾಂನಲ್ಲಿ ಒಂದು ಸಣ್ಣ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮನೆಯ ಮೆಟ್ಟಿಲಿನ ಮೇಲೆ ನಿಖಿಲ್ ಕುಳಿತಿದ್ದಾರೆ. ಅಲ್ಲಿಯೇ ಪತ್ನಿ ರೇವತಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಕುಳಿತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ರೇವತಿ ಅಲ್ಲ, ಅತ್ತೆ ನನ್ನ ಅಭಿಮಾನಿ: ನಿಖಿಲ್

nikhilgowda jaguar

ರೇವತಿ ಪತಿಯ ಮುಖವನ್ನು ನೋಡಿ ಏನೋ ಹೇಳಿದ್ದಾರೆ. ಅದಕ್ಕೆ ನಿಖಿಲ್ ಮೊದಲಿಗೆ ಏನು ಮಾತನಾಡದೆ ತಲೆಯಾಡಿಸಿದ್ದಾರೆ. ನಂತರ ನಸು ನಕ್ಕಿದ್ದಾರೆ. ಪತಿಯ ನಗುವನ್ನು ಕಂಡು ರೇವತಿ ಕೂಡ ಜೋರಾಗಿ ನಕ್ಕಿದ್ದಾರೆ. ಇಬ್ಬರು ವಿಡಿಯೋದಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದು, ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Nikhil Kumaraswamy Wife Revathi 2

ಕೆಲವು ದಿನಗಳ ಹಿಂದೆಯಷ್ಟೆ ಸಂದರ್ಶನವೊಂದರಲ್ಲಿ ನಿಖಿಲ್ ಪತ್ನಿಯ ಬಗ್ಗೆ ಮಾತನಾಡಿದ್ದರು. ರೇವತಿ ಅವರು ಅಡುಗೆ ಮಾಡುತ್ತಾರಂತೆ, ಆದರೆ ನನಗೆ ಅದರ ಬಗ್ಗೆ ಗೊತ್ತಿಲ್ಲ. ಈವರೆಗೂ ಅವರು ಅಡುಗೆ ಮಾಡಿದ್ದು ನೋಡಿಲ್ಲ ನಾನು. ಒಮ್ಮೆ ಬಿರಿಯಾನಿ ಏನೋ ಮಾಡಿದ್ದರಂತೆ. ಆದರೆ ಆ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದು ಪತ್ನಿಯ ಬಗ್ಗೆ ನಿಖಿಲ್ ಮನಬಿಚ್ಚಿ ಮಾತನಾಡಿದ್ದರು. ಇದರ ಬೆನ್ನಲ್ಲೆ ನಿಖಿಲ್ ತಮ್ಮ ಪತ್ನಿ ಅಡುಗೆ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು.

NIKHIL REVATI

ನನ್ನ ತಂದೆ-ತಾಯಿ ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಅದೇ ರೀತಿ ನನ್ನ ತಂದೆ-ತಾಯಿಯೊಂದಿಗೆ ಚೆನ್ನಾಗಿ ಹೊಂದಿಕೆಯಾಗುವ ಹುಡುಗಿ ಸಿಕ್ಕರೆ ಸಾಕು ಎಂದುಕೊಂಡಿದ್ದೆ. ಆದರೆ ಅದಕ್ಕಿಂತಲೂ ಮಿಗಿಲಾದವರು ಸಿಕ್ಕಿದ್ದಾರೆ. ಯಾವುದೇ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ರೇವತಿ ಬಹಳ ಮೃದು ಹೃದಯಿ, ಆದರೆ ಸುಮ್ಮಸುಮ್ಮನೆ ಅಳುತಿರುತ್ತಾರೆ. ಕ್ಯೂಟ್ ಮಗುತರ ಅಳುತಿರುತ್ತಾರೆ. ಕಾವೇರಿಯನ್ನು ಕಣ್ಣಲ್ಲೇ ತುಂಬಿಕೊಂಡಿದ್ದಾರೆ ಎಂದು ನಿಖಿಲ್ ತಮ್ಮ ಪತ್ನಿ ರೇವತಿ ತಮಾಷೆಗಾಗಿ ಕಾಳೆದಿದ್ದರು.

https://www.instagram.com/p/CFTic0RJMQV/?igshid=dpxpsa8g1k5h

ಕುರುಕ್ಷೇತ್ರ ಸಿನಿಮಾವನ್ನು ರೇವತಿ ನೋಡಿರಲಿಲ್ಲ. ಅವರ ತಂದೆ-ತಾಯಿ ನೋಡಿದ್ದರು. ಇತ್ತೀಚೆಗೆ ನಾನು ಕುರುಕ್ಷೇತ್ರ ಸಿನಿಮಾ ತೋರಿಸಿದೆ. ಈ ವೇಳೆ ಅಭಿಮನ್ಯು ಸಾವನ್ನಪ್ಪಿದ ನಂತರ ಜೋರಾಗಿ ಅತ್ತರು. ನನ್ನ ಪತ್ನಿ ನನ್ನ ಫ್ಯಾನ್ ಅಲ್ಲ, ನನ್ನ ಅತ್ತೆಯವರು ನನ್ನ ಫ್ಯಾನ್, ಅವರು ಸಿನಿಮಾಗಳನ್ನು ನೋಡಿದ್ದಾರೆ. ರೇವತಿ ಕೆಲವು ಸಿನಿಮಾಗಳನ್ನಷ್ಟೆ ನೋಡಿದ್ದಾರೆ ಎಂದು ನಿಖಿಲ್ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *