– ಪತ್ನಿ ಸತ್ತಿದ್ದಕ್ಕೆ ಅತ್ತಿಗೆಯನ್ನ ಪ್ರೇಮಿಸಿ ಮದ್ವೆಯಾಗಿದ್ದ ನೀಚ
– ಇಬ್ಬರ ಶವ ಹಾಸಿಗೆಯಲ್ಲಿ ಸುತ್ತಿಟ್ಟು ಮನೆಯಲ್ಲಿದ್ದ
– ಶವಗಳ ಜೊತೆ 24 ಗಂಟೆ ವಾಸ
ಭೋಪಾಲ್: ಪತ್ನಿ ಮತ್ತು ಒಂದು ವರ್ಷದ ಹೆಣ್ಣು ಮಗು ವನ್ನು ಕೊಂದು ಮೃತದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ರೀವಾ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಕೊಲೆಯ ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ಶವಗಳ ಜೊತೆಯಲ್ಲಿ 24 ಗಂಟೆ ಕಳೆದಿದ್ದಾನೆ. ಇದನ್ನೂ ಓದಿ: ಮೊಬೈಲ್ ಕಿತ್ತುಕೊಂಡ ಪತಿ – ಮಕ್ಕಳನ್ನು ಕೊಂದು ಪತ್ನಿ ಆತ್ಮಹತ್ಯೆ
ರಿವಾ ಜಿಲ್ಲೆಯಿಂದ 70 ಕಿಲೋ ಮೀಟರ್ ದೂರದಲ್ಲಿರುವ ಮಾವೂಗಂಜ್ ಠಾಣಾ ವ್ಯಾಪ್ತಿಯ ರಾಮನಗರ ಗ್ರಾಮದಲ್ಲಿ ಜೋಡಿ ಕೊಲೆ ನಡೆದಿದೆ. ಆರೋಪಿಯ ಮೊದಲ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರಿಂದ ವಿಧವೆ ಅತ್ತಿಗೆ ಪ್ರಮೀಳಾರನ್ನ ಪ್ರೀತಿಸಿ ಎರಡನೇ ಮದುವೆ ಆಗಿದ್ದನು. ದಂಪತಿಗೆ ಒಂದು ವರ್ಷದ ಹೆಣ್ಣು ಮಗು ಸಹ ಇತ್ತು. ಪತ್ನಿ ಮತ್ತು ಮಗು ಕೊಲೆಗೈದು, ಎರಡೂ ಶವಗಳನ್ನ ತುಂಡು ತುಂಡಾಗಿ ಕತ್ತರಿಸಿ, ಹಾಸಿಗೆಯಲ್ಲಿ ಸುತ್ತಿ ಕಟ್ಟಿದ್ದಾನೆ. ಮರುದಿನ ರಾತ್ರಿ ಶವಗಳನ್ನ ನಿರ್ಜನ ಪ್ರದೇಶದಲ್ಲಿ ಎಸೆಯುವ ಪ್ಲಾನ್ ಮಾಡಿದ್ದನು. ಇದನ್ನೂ ಓದಿ: ವಯಸ್ಸು 58 ಆದ್ರು ಮೂವರ ಜೊತೆ ಸಂಬಂಧ- 50ಕ್ಕೂ ಅಧಿಕ ಬಾರಿ ಇರಿದು ಕೊಂದ್ಳು
ರಾತ್ರಿ ತಂದೆ ಸರಾಯಿ ಮತ್ತು ಮೊಟ್ಟೆ ತಂದಿದ್ದರು. ಮೂವರು ಜೊತೆಯಾಗಿ ಕುಡಿದ ಬಳಿಕ ನನ್ನನ್ನು ಹೊರಗೆ ಕಳುಹಿಸಿದ್ದ ಎಂದು ಮೃತ ಮಹಿಳೆಯ ಮಗ ಹೇಳಿದ್ದಾನೆ. ಆರೋಪಿಯ ಮೊದಲ ಪತ್ನಿ ಸಾವಿನ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿದ್ದವು. ಇದೀಗ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನ ಕೊಲೆಗೈದಿದ್ದಾನೆ. ಆರೋಪಿಯ ಚಲನವಲನ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮನೆ ಪರಿಶೀಲನೆ ನಡೆಸಿದಾಗ ತುಂಡು ತುಂಡಾದ ಶವಗಳು ಪತ್ತೆಯಾಗಿವೆ. ಇದನ್ನೂ ಓದಿ: ಸ್ಕೂಲ್ ಪಕ್ಕದ ಪಾರ್ಕಿನಲ್ಲಿ ಟೆಂಟ್ ಹಾಕಿ ಸೆಕ್ಸ್ ದಂಧೆ
ಆರೋಪಿ ಪತ್ನಿಯ ಸಂದೇಹ ವ್ಯಕ್ತಪಡಿಸುತ್ತಿದ್ದನು. ಇದೇ ವಿಷಯಕ್ಕೆ ಗಂಡ-ಹೆಂಡತಿ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಯ ಮೊದಲ ಪತ್ನಿ ನಿಧನದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಿವಾ ಎಸ್.ಪಿ. ರಾಕೇಶ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ‘ನಾನು ದಂಧೆ ಮಾಡೋಳು ಏನ್ ಮಾಡ್ಕೋತ್ತೀರಿ’- ಆಂಟಿಯ ಹೈಟೆಕ್ ಸೆಕ್ಸ್ ದಂಧೆ-ಗುಮ್ಮಟ ನಗರಿಯಲ್ಲಿ ಆಂಟಿಯ ಮಾಂಸ ದಂಧೆ