ಬೆಂಗಳೂರು: ವಿವಾಹದ ಬಳಿಕ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ದಾಂಪತ್ಯ ಜೀವನವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಸುತ್ತಾಟ ನಡೆಸುವ ಮೂಲಕ ಲಾಕ್‍ಡೌನ್ ಸಮಯವನ್ನು ಕಳೆಯುತ್ತಿದ್ದಾರೆ. ಆದರೆ ರೇವತಿ ಮನೆ ಕೆಲಸ ಮಾಡಿದ ವಿಡಿಯೋವನ್ನು ಹಂಚಿಕೊಂಡಿರಲಿಲ್ಲ. ಇದೀಗ ನಿಖಿಲ್ ಕುಮಾರಸ್ವಾಮಿಯವರು ವಿಡಿಯೋವೊಂದನ್ನು ರಿವೀಲ್ ಮಾಡಿದ್ದಾರೆ.
ಹೌದು. ಈ ಕುರಿತು ನಿಖೀಲ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿದ್ದು, ರೇವತಿಯವರು ಅಡುಗೆ ಮಾಡುವ ವಿಡಿಯೋವನ್ನು ಹಾಕಿಕೊಂಡಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ಸಹ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಒಂದು ಬಾರಿಯೂ ಪತ್ನಿ ಅಡುಗೆ ಮಾಡಿಲ್ಲ. ಆದರೆ ಅಡುಗೆ ಮಾಡಲು ಬರುತ್ತೆ ಎಂಬುದು ತಿಳಿದಿದ್ದೇನೆ ಎಂದು ನಿಖೀಲ್ ಹೇಳಿದ್ದರು. ಆದರೆ ಇದೀಗ ಪತ್ನಿ ಅಡುಗೆ ಮಾಡುತ್ತಿರುವ ವಿಡಿಯೋವನ್ನೇ ಹಂಚಿಕೊಂಡಿದ್ದಾರೆ.
ರೇವತಿಯವರು ಅಡುಗೆ ಮಾಡುವ ಎರಡು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ನಾನ್ ವೆಜ್ ಮಾಡುತ್ತಿರುವಂತೆ ಕಾಣುತ್ತದೆ. ಇದನ್ನು ಖುಷಿಯಿಂದಲೇ ನಿಖಿಲ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ಸದ್ದು ಮಾಡುತ್ತಿದೆ.
ರೇವತಿ ಅವರು ಅಡುಗೆ ಮಾಡುತ್ತಾರಂತೆ, ಆದರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ಈವರೆಗೂ ಅವರು ಅಡುಗೆ ಮಾಡಿದ್ದನ್ನು ನೋಡಿಲ್ಲ. ಒಮ್ಮೆ ಬಿರಿಯಾನಿ ಏನೋ ಮಾಡಿದ್ದರಂತೆ. ಆದರೆ ಆ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ತಂದೆ-ತಾಯಿ ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಅದೇ ರೀತಿ ನನ್ನ ತಂದೆ-ತಾಯಿಯೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವ ಹುಡುಗಿ ಸಿಕ್ಕರೆ ಸಾಕು ಎಂದುಕೊಂಡಿದ್ದೆ. ಆದರೆ ಅದಕ್ಕಿಂತ ಮಿಗಿಲಾದವರು ಸಿಕ್ಕಿದ್ದಾರೆ. ಯಾವುದೇ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ರೇವತಿ ಬಹಳ ಮೃದು ಹೃದಯಿ, ಆದರೆ ಸುಮ್ಮಸುಮ್ಮನೆ ಅಳುತಿರುತ್ತಾರೆ. ಅಣ್ಣ ವಿಷಯಕ್ಕೂ ಮಗು ರೀತಿ ಅಳುತಿರುತ್ತಾರೆ. ಕಾವೇರಿಯನ್ನು ಕಣ್ಣಲ್ಲೇ ತುಂಬಿಕೊಂಡಿದ್ದಾರೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಪತ್ನಿ ರೇವತಿಯನ್ನು ಕಿಚಾಯಿಸಿದ್ದರು.
ನನ್ನ ಪತ್ನಿಗೆ ಸ್ವಚ್ಛತೆಯ ಗೀಳು ಎಲ್ಲವೂ ಸ್ವಚ್ಛವಾಗಿರಬೇಕು ಎಂದುಕೊಳ್ಳುತ್ತಾರೆ. ನಾನು ನನ್ನ ರೂಮಿಗೆ ಬಂದರೆ ತುಂಬಾ ವಸ್ತುಗಳು ಹರಡುತ್ತಿದ್ದವು. ಮದುವೆಗೆ ಮುಂಚೆ ನನ್ನ ರೂಂ ಅನ್ನು ವರ್ಷಕ್ಕೆ ಒಮ್ಮೆ ಮಾತ್ರ ಕ್ಲೀನ್ ಮಾಡುತ್ತಿದ್ದೆ. ಆದರೆ ಈಗ ಸಾಕಷ್ಟು ಬದಲಾಗಿದ್ದೀನಿ. ನನ್ನ ಪತ್ನಿ ರೇವತಿಗೆ ಇದು ಸಾಲದಂತೆ, ಇನ್ನೂ ಬದಲಾಗಬೇಕೆಂತೆ ಎಂದು ನಿರೂಪಕಿ ಅನುಶ್ರೀ ನಡೆಸಿದ ಸಂದರ್ಶನದಲ್ಲಿ ನಿಖಿಲ್ ತಮ್ಮ ಪತ್ನಿ ಬಗ್ಗೆ ಮಾತನಾಡಿದ್ದಾರೆ.
ನಾಲ್ಕು ತಿಂಗಳ ದಾಂಪತ್ಯ ಜೀವನವನ್ನು ಕಳೆದಿರುವ ನಿಖಿಲ್ ಹಾಗೂ ರೇವತಿ ಸಖತ್ ಆಗೇ ಎಂಜಾಯ್ ಮಾಡುತ್ತಿದ್ದಾರೆ ಎಂಬುದು ತಿಳಿದೇ ಇದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವರು ಪೋಸ್ಟ್ ಗಳನ್ನು ಸಹ ಹಾಕುತ್ತಿರುತ್ತಾರೆ. ಇತ್ತೀಚೆಗೆ ಲಾಕ್‍ಡೌನ್ ಸಮಯದಲ್ಲಿ ಫಾರ್ಮ್ ಹೌಸ್‍ನಲ್ಲಿ ಸುತ್ತಾಡುತ್ತಿರುವ ಚಿತ್ರವನ್ನು ಅವರು ಹಂಚಿಕೊಂಡಿದ್ದರು.
ಕಳೆದ ವಾರ ನಾಗರಹೊಳೆ ಅಭಯಾರಣ್ಯಕ್ಕೂ ಭೇಟಿ ನೀಡಿದ್ದ ಜೋಡಿ ಮೈಸೂರು ದಸರಾದ ಅಂಬಾರಿ ಹೊರುವ ಗಜಪಡೆಯ ನಾಯಕ ಅರ್ಜುನ ಹಾಗೂ ದುರ್ಗಾಪರಮೇಶ್ವರಿಯೊಂದಿಗೆ ಫೋಟೋ ತೆಗೆಸಿಕೊಂಡಿತ್ತು. ಅಲ್ಲದೆ ಕುಟುಂಬ ಸಮೇತರಾಗಿ ಸರಳವಾಗಿ ಗಣೇಶೋತ್ಸವ ಆಚರಿಸಿದ ಕುರಿತು ಸಹ ನಿಖಿಲ್ ಅಪ್‍ಡೇಟ್ ನೀಡಿದ್ದರು. ಲಾಕ್‍ಡೌನ್ ಬಳಿಕ ನಿಖಿಲ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದು, ಇತ್ತೀಚೆಗಷ್ಟೇ ಅವರ ಮುಂದಿನ ರೈಡರ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಮತ್ತೆ ನಟೆನೆಯತ್ತ ಮುಖ ಮಾಡಿದ್ದಾರೆ.