ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಸಂಬಂಧ ನನಗೆ ತಿಳಿದಿರುವ ಪ್ರಕಾರ ಸುಮಾರು ಸಚಿವರುಗಳು 15-16 ಮಠಗಳಿಗೆ ಭೇಟಿ ನೀಟಿದ್ದಾರೆ. ಲ್ಯಾಪ್‍ಟಾಪ್ ತಗೆದುಕೊಂಡು ಹೋಗಿ ಮಠಾಧೀಶರಿಗೆ ತೋರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸಚಿವರು ಯಾಕೆ ಮಠಕ್ಕೆ ಹೋಗಿದ್ದಾರೆ. ಕೆಲವರು ಲ್ಯಾಪ್‍ಟಾಪ್ ಸಹಾ ತೆಗೆದುಕೊಂಡು ಹೋಗಿದ್ದಾರಂತೆ. ಹೋದದ್ದು ಯಾಕೆ? ಏನು ಗೊತ್ತಿಲ್ಲ ಎಂದರು. ಇದನ್ನೂ ಓದಿ: ಸಿಎಂ ರೇಸ್ ಬಗ್ಗೆ ನಾನು ಹೇಳಿಕೆ ನೀಡಲ್ಲ, 1 ಸಹಿ ಸಂಗ್ರಹ ನಡೆದಿತ್ತು: ಬೆಲ್ಲದ
65 ಶಾಸಕರ ಸಹಿಗೆ ಕಿಮ್ಮತ್ತಿದ್ದರೆ ಅದನ್ನು ಬಹಿರಂಗ ಪಡಿಸಲಿ. ಲ್ಯಾಪ್‍ಟಾಪ್ ತಂದು ಸ್ವಾಮೀಜಿಯವರಿಗೆ ತೋರಿಸಿದ್ದರು ಎಂಬ ಮಾಹಿತಿ ಇದೆ. ಅದೇನು ಎಂಬುದರ ಬಗ್ಗೆ ನಾನು ಹೆಚ್ಚಿಗೆ ಹೇಳಲು ಹೋಗುವುದಿಲ್ಲ. ಲ್ಯಾಪ್‍ಟಾಪ್ ಹೊತ್ತೊಯ್ದು ಸ್ವಾಮೀಜಿಗಳ ಬಳಿ ಹೋದ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ಅದೇಕೆ ಸಚಿವರು ಹೋಗಿದ್ದಾರೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಯಡಿಯೂರಪ್ಪ ಪರವಾಗಿ 65ಕ್ಕೂ ಹೆಚ್ಚು ಶಾಸಕರ ಸಹಿ: ರೇಣುಕಾಚಾರ್ಯ
ಈಗ ಸಹಿ ಅಭಿಯಾನ ಅಂತಾರೆ. ನಾಚಿಕೆ ಮಾನ ಮರ್ಯಾದೆ ಇದ್ದರೆ, ಲ್ಯಾಪ್‍ಟಾಪಲ್ಲಿ ಏನಿತ್ತು ಎಂದು ಜನಕ್ಕೆ ತೋರಿಸಲಿ. ಜನ ಸಾಯುತ್ತಿದ್ದಾರೆ. ನಮಗೆ ಬೂದಿ ನೀಡುತ್ತಿದ್ದಾರೆ. ಗ್ರಾಮಿಣಾಭಿವೃದ್ದಿ ಇಲಾಖೆ ವಿಚಾರವಾಗಿ ಸಹಿ ಹಾಕಿರೋದು ನೋಡಿದ್ದೇವೆ. ರಾಜ್ಯಪಾಲರ ಸಹಿ ಹಾಕಿದ್ದು ಗೊತ್ತಿದೆ. ಮಠಕ್ಕೆ ಹೋಗಿರುವುದು ಗೊತ್ತಿದೆ. ಸಿಡಿ ವಿಚಾರವಾಗಿಯೂ ಗೊತ್ತಿದೆ ಎಂದು ಡಿಕೆಶಿ ಹೇಳಿದರು.