ಧಾರವಾಡ: ಮಚ್ಚು ಲಾಂಗು ಹಿಡಿದು ಬಡಾವಣೆಯಲ್ಲಿ ಓಡಾಡುತ್ತಿರುವ ದರೋಡೆಕೋರರ ಗುಂಪು ಮೂರು ಮನೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಧಾರವಾಡ ನಗರದ ಮದಿಹಾಳದ ಗಣೇಶನಗರದಲ್ಲಿ ನಡೆದಿದೆ.
ಮಚ್ಚು ಲಾಂಗು ಹಿಡಿದುಕೊಂಡ ದರೋಡೆಕೋರರು ಕಳೆದ ರಾತ್ರಿ ಧಾರವಾಡ ನಗರದ ಮದಿಹಾಳದ ಗಣೇಶನಗರಲ್ಲಿ 10 ಮಂದಿ ಕಳ್ಳರು ಇರುವ ಗುಂಪು ಇದೇ ಬಡಾವಣೆಯ 3 ಮನೆಗಳನ್ನು ಕಳ್ಳತನ ಮಾಡಿದೆ.
ಕಳ್ಳರ ಗ್ಯಾಂಗ್ ಓಡಾಡುತಿರುವ ದೃಶ್ಯ ಬಡಾವಣೆಯಲ್ಲಿರುವ ಸಿಸಿ ಟಿವಿಯೊಂದರಲ್ಲಿ ಸೆರೆಯಾಗಿದೆ. ಗಣೇಶನಗರದ ಅಸ್ಲಂ ಮುಲ್ಲಾ, ಗಂಗವ್ವ ಮುದಕಣ್ಣವರ ಮತ್ತು ಆರ್ಯರ ಮನೆಯಲ್ಲಿರುವ ಅಪಾರ ಪ್ರಮಾಣದ ಚಿನ್ನ ಹಾಗೂ ಹಣ ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ.
ಕಳೆದ 8 ದಿನಗಳಿಂದ ಈ ಕಳ್ಳರ ಗುಂಪು ನಗರ ಹಲವು ಕಡೆ ಓಡಾಡುತಿತ್ತು. ಕೆಲ ಮನೆ ಬಾಗಿಲನ್ನು ಬಡಿದು ಕಳ್ಳತನಕ್ಕೆ ಯತ್ನ ಮಾಡುತ್ತಿದ್ದರು. ಆದರೆ ಕಳೆದ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿದ ಈ ದರೋಡೆಕೋರರ ಗುಂಪು ಕಳ್ಳತನ ಮಾಡಿ ಪರಾರಿಯಾಗಿದೆ.
ಈ ಸಂಬಂಧ ಶಹರ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತನಿಖೆ ಕೈಗೊಂಡಿದ್ದಾರೆ.