ನವದೆಹಲಿ : ಕೇಂದ್ರ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಮರು ಪರಿಶೀಲಿಸಬೇಕು. ವಲಸೆ ಕಾರ್ಮಿಕರು ಮತ್ತು ರೈತರ ಖಾತೆಗಳಿಗೆ ನೇರವಾಗಿ ಹಣ ಹಾಕುವಂತೆ ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.
ದೇಶದ ಹಲವು ರಾಜ್ಯಗಳ ಪತ್ರಕರ್ತರ ಜೊತೆಗೆ ನಡೆದ ವಿಡಿಯೋ ಕಾನ್ಫರೆನ್ಸ್ ಸಂವಾದದಲ್ಲಿ ಮಾತನಾಡಿದ ಅವರು, ಅವಶ್ಯಕತೆ ಇರುವವರ ಖಾತೆಗೆ ಹಣ ಹಾಕಿ, ಬಡವರ ಜೇಬಿಗೆ ನೇರವಾಗಿ ಹಣ ತಲುಪಬೇಕು. ಬಡ ಜನರಿಗೆ ಲೋನ್ ಅವಶ್ಯಕತೆ ಇಲ್ಲ. ಅವರಿಗೆ ಬೇಕಿರುವುದು ಆರ್ಥಿಕ ನೆರವು ಅವರ ಖಾತೆಗಳಿಗೆ, ಕೈಗಳಿಗೆ ನೇರ ಹಣ ವರ್ಗಾಯಿಸಿ ಎಂದು ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
LIVE: Special Press Briefing by Shri @RahulGandhi via video conferencing. #RahulCaresForIndia https://t.co/FAerk6Kf8q
— Congress (@INCIndia) May 16, 2020
ವಲಸೆ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿದೆ. ಭಾರತದ ಭವಿಷ್ಯದ ಮಕ್ಕಳು ರೋಡ್ ನಲ್ಲಿವೆ. ಪ್ರತಿನಿತ್ಯ ಕಾರ್ಮಿಕರು ವಲಸೆ ಹೋಗುವುದು ನಿಲ್ಲುತ್ತಿಲ್ಲ. ದೇಶ ಅವರ ನೆರವಿಗೆ ನಿಲ್ಲಬೇಕು ಎಂದರು. ಮಗ ಸಂಕಷ್ಟದಲ್ಲಿದ್ದಾಗ ತಾಯಿ ಸಾಲ ನೀಡುವುದಿಲ್ಲ ನೆರವು ನೀಡುತ್ತಾಳೆ. ಹಾಗೇ ಸರ್ಕಾರವು ಜನರ ನೆರವಿಗೆ ಮುಂದಾಗಬೇಕು. ನೇರವಾಗಿ ಹಣದ ವರ್ಗಾವಣೆ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಲಿದೆ. ಇದರ ಜೊತೆಗೆ ಮನರೇಗಾದಡಿ ಕೂಲಿ ದಿನಗಳನ್ನು 200ಕ್ಕೆ ಹೆಚ್ಚಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
Statement of Shri @RahulGandhi#RahulCaresForIndia pic.twitter.com/gX2OU59mot
— Congress (@INCIndia) May 16, 2020
ಲಾಕ್‍ಡೌನ್ ಎಚ್ಚರಿಕೆಯಿಂದ ಹಂತ ಹಂತವಾಗಿ ಸಡಿಲಿಸಬೇಕು. ದುರ್ಬಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಲಾಕ್‍ಡೌನ್ ವಿನಾಯತಿ ನೀಡಬೇಕು. ಲಾಕ್‍ಡೌನ್ ವಿನಾಯತಿಯಿಂದ ತೊಂದರೆಗಳಾಗಬಾರದು ಸರ್ಕಾರ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ರಾಹುಲ್ ಗಾಂಧಿ ಹೇಳಿದರು.