– ಇಬ್ಬರನ್ನೂ ಬಂಧಿಸಿದ ಪೊಲೀಸರು
ಮುಂಬೈ: ಆರೋಪಿ ಮಗ ತಪ್ಪಿಸಿಕೊಳ್ಳಲು ಸಹಾಯ ಮಾಡಲು ಮಹಿಳೆ ಪೊಲೀಸರ ಮೇಲೆಯೇ ಖಾರದ ಪುಡಿ ಎರಚಿರುವ ಘಟನೆ ನಡೆದಿದೆ.
ಮುಂಬೈನ ಮಲ್ವಾನಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ತಕ್ಷಣವೇ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಮಹಿಳೆಯ ಮಗನನ್ನು ಬಂಧಿಸಲು ಇಬ್ಬರು ಪೊಲೀಸರು ಅಂಬುಜ್ವಾಡಿಯ ನಿವಾಸಕ್ಕೆ ತೆರಳಿದ್ದು, ಈ ವೇಳೆ ಇದ್ದಕ್ಕಿದ್ದಂತೆ ಮಹಿಳೆ ಪೊಲೀಸರ ಮೇಲೆಯೇ ಖಾರದ ಪುಡಿ ಎರಚಿದ್ದಾಳೆ. ಈ ಮೂಲಕ ಆರೋಪಿ ಮಗನನ್ನು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಳಿಕ ಆರೋಪಿಯನ್ನು ಮಲಾದ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮೊದಲು ಖಾರದ ಪುಡಿ ಎರಚಿದ ಮಹಿಳೆಯನ್ನು ಸಹ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 353, 332, 504, 506, 509 ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.