ಮಗಳ ಮುಂದೆಯೇ ಮಹಿಳೆಗೆ ಕತ್ತರಿಯಿಂದ ಇರಿದು ಕೊಂದ ಪ್ರಿಯಕರ!

Public TV
1 Min Read
MOTHER

– ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದ ಮಹಿಳೆ
– ತೀವ್ರ ರಕ್ತಸ್ರಾವವಾಗಿ ಮಗಳ ಎದುರೇ ಉಸಿರು ನಿಲ್ಲಿಸಿದ್ಳು

ಇಂದೋರ್: ಇಂದಿನ ಕಾಲದ ಯುವಕ-ಯುವತಿಯರು ಸೋಶಿಯಲ್ ಮೀಡಿಯಾಗೆ ಫುಲ್ ಅಡಿಕ್ಟ್ ಆಗಿ ಹೋಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರ ಕೈನಲ್ಲೂ ಒಂದಲ್ಲ ಒಂದು ಮೊಬೈಲ್ ಇದ್ದೇ ಇರುತ್ತದೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗುವ ಅಪರಿಚಿತರೊಂದಿಗೆ ಚಾಟಿಂಗ್, ಡೇಟಿಂಗ್ ಎಂದು ಲೋಕವನ್ನೇ ಮರೆತು ಹೋಗಿರುತ್ತಾರೆ. ಹೀಗೆ ಆನ್‍ಲೈನ್ ನಲ್ಲಿ ಶುರುವಾದ ಪ್ರೀತಿಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

WOMAN 3

ಪ್ರಿಯಾ ಅಗರ್‍ವಾಲ್(26) ಎಂಬ ಮಹಿಳೆಯೊಬ್ಬಳು ಪತಿ ಮತ್ತು ಮುದ್ದಾದ ಮಗಳೊಂದಿಗೆ ಇಂದೋರ್ ನಲ್ಲಿ ನೆಲೆಸಿದ್ದಳು. ಆದರೆ ಪ್ರಿಯಾ ಅಗರ್‍ವಾಲ್‍ಗೆ ಆನ್‍ಲೈನ್ ಮೂಲಕ ಕಳೆದ ವರ್ಷ ಸೌರಭ್ ಎಂಬ ವ್ಯಕ್ತಿ ಪರಿಚಯವಾಗಿದ್ದಾನೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಹೀಗೆ ಚಾಟ್ ಮಾಡುತ್ತಾ, ಮಾಡುತ್ತಾ ಒಬ್ಬರಿಗೊಬ್ಬರು ಬಹಳ ಆತ್ಮೀಯರಾದರು. ಇತ್ತೀಚೆಗೆ ಪ್ರಿಯಾ ಸೌರಭ್ ಜೊತೆ ಮಾತನಾಡುವುದನ್ನು ಕಡಿಮೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಸೌರಭ್, ಆಕೆಯನ್ನು ಭೇಟಿ ಮಾಡುವಂತೆ ಕರೆಸಿಕೊಂಡಿದ್ದಾನೆ.

police web 11

ಅಂತೆಯೇ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಪ್ರಿಯಾ, ಆತನನ್ನು ಭೇಟಿ ಮಾಡಲು ಮಗಳೊಂದಿಗೆ ಗ್ಯಾನಶೀಲ ಸೂಪರ್ ಸಿಟಿ ಬಳಿ ಇರುವ ಖಾಲಿ ಜಾಗಕ್ಕೆ ಬಂದಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಮಾಡುತ್ತಾ ವಿಕೋಪಕ್ಕೆ ತಿರುಗಿ ಸೌರಭ್ ತನ್ನ ಬಳಿ ಇದ್ದ ಕತ್ತರಿಯಿಂದ ಆಕೆಯ ಮೇಲೆ ಎರಡು ಬಾರಿ ಚುಚ್ಚಿದ್ದಾನೆ. ಪರಿಣಾಮ ಮುಖ ಮತ್ತು ಕತ್ತಿಗೆ ಇರಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಪ್ರಿಯಾಗೆ ರಕ್ತ ಹರಿಯಲು ಆರಂಭಿಸಿದೆ. ಮಗಳ ಮುಂದೆ ಉಸಿರಾಡಲು ಕೂಡ ಆಗದೇ ಪ್ರಿಯಾ ಸಮೀಪದಲ್ಲಿದ್ದ ಅಂಗಡಿ ಮುಂದೆ ಕುಸಿದಿದ್ದಾಳೆ. ಆದರೂ ಸೌರಭ್ ಇದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಸ್ಕೂಟರ್ ಹತ್ತಿ ಆರಾಮವಾಗಿ ಸ್ಥಳದಿಂದ ಹೋಗುತ್ತಾನೆ. ಇನ್ನೂ ಈ ವೀಡಿಯೋ ರಸ್ತೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Police Jeep 1 2 medium

Share This Article
Leave a Comment

Leave a Reply

Your email address will not be published. Required fields are marked *