ಭೋಪಾಲ್: ಮಗಳ ಮದುವೆಗೆ ಕೂಡಿಟ್ಟಿರುವ 2 ಲಕ್ಷ ಹಣವನ್ನು ಆಕ್ಸಿಜನ್ ಖರೀದಿಗೆ ರೈತರೊಬ್ಬರು ದೇಣಿಗೆಯಾಗಿ ನೀಡಿದ್ದಾರೆ.
ಚಂಪಾಲಾಲ್ ಗುರ್ಜಾರ್ ಗ್ವಾಲ್ ದೇವಿಯಾನ್ ನಿವಾಸಿಯಾಗಿದ್ದಾರೆ. ಈವರು ತಮ್ಮ ಮಗಳು ಸನಿಕಾಓಳ ಮದುವೆಗಾಗಿ ಒಂದಿಷ್ಟು ಹಣವನ್ನು ಹೊಂದಿಸಿದ್ದರು. ಮಗಳ ವಿವಾಹವನ್ನು ಅದ್ದೂರಿಯಾಗಿ ಮಾಡಬೇಕೆಂದುಕೊಂಡಿದ್ದರು. ಆದರೆ ಕೊರೊನಾ ಇರುವುದರಿಂದ ಕೊನೇ ಘಳಿಗೆಯಲ್ಲಿ ಮನಸ್ಸು ಬದಲಿಸಿದ್ದಾರೆ.
ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕದ ಕೊರೊತೆ ಉಂಟಾಗಿದೆ. ಅದನ್ನು ಮನಗಂಡ ಚಂಪಾಲಾಲ್ ಮಗಳ ಮದುವೆಯ ಸ್ಮರಣೀಯವಾಗಿಸಲು ಮದುವೆಗೆ ಹೊಂದಿಸಿದ್ದ ಹಣವನ್ನು ಆಮ್ಲಜನಕ ಖರೀದಿಗೆ ನೀಡಿದ್ದಾರೆ. ಆಕ್ಸಿಜನ್ ಸಿಲಿಂಡರ್ ಖರಿದೀಸಲು 2ಲಕ್ಷ ರೂಪಾಯಿ ಹಣದ ಚೆಕ್ ಅನ್ನು ಜಿಲ್ಲಾಧಿಕಾರಿಯಾಗಿರುವ ಮಯಾಂಕ್ ಅಗ್ರವಾಲ್ ಅವರಿಗೆ ಹಸ್ತಾಂತರಿಸಿದ್ದಾರೆ. ಒಂದು ಆಕ್ಸಿಜನ್ ಸಿಲಿಂಡರ್ ಅನ್ನು ಜಿಲ್ಲಾ ಆಸ್ಪತ್ರೆಗೆ ಮತ್ತು ಇನ್ನೊಂದು ತಹಸಿಲ್ ಆಸ್ಪತ್ರೆಗೆ ನೀಡಲು ಕೇಳಿದ್ದಾರೆ.
ರೈತಾ ಚಂಪಾಲ್ ಅವರು ತಮ್ಮ ಮಗಳ ಮದುವೆಗೆ ಕೂಡಿಟ್ಟಿರುವ ಹಣವನ್ನು ನೀಡಿದ್ದಾರೆ. ಅವರ ಈ ಸಾಮಾಜಿಕಳಕಳಿ ಮೆಚ್ಚುವಂತದ್ದೂ ಎಂದು ಜಿಲ್ಲಾಧಿಕಾರಿಗಳು ಶ್ಲಾಘಿಸಿದ್ದಾರೆ.