ಮಗಳ ಜೊತೆ ಸೇರಿ ಪತಿಯ ಕೊಲೆಗೈದ ಪತ್ನಿ-ಪೊಲೀಸರ ಮುಂದೆ ಕಥೆ ಕಟ್ಟಿದ್ರು

Public TV
2 Min Read
crime

– ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಪತಿಗೆ ಶಂಕೆ

ಮುಂಬೈ: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ವಿಚಾರದ ಕುರಿತು ಜಗಳ ನಡೆದಿದ್ದು, ಈ ವೇಳೆ ಮಹಿಳೆ ಮಗಳ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದಾರೆ.

Police Jeep 1 2 medium

ಮುಂಬೈನ ನಾಲಾ ಸೋಪಾರಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು ಸುರೇಶ್ ವಘೇಲಾ ಎಂದು ಗುರುತಿಸಲಾಗಿದೆ. ಆರೋಪಿಗಳಾದ ವಘೇಲಾರ ಪತ್ನಿ ಹಾಗೂ ಮಗಳನ್ನು ಜಾಸು, ಮೋನಿಕಾ ಎಂದು ಗುರುತಿಸಲಾಗಿದೆ. ಮಗಳು ಮೋನಿಕಾ ವಿಧವೆಯಾಗಿದ್ದು, ವಘೇಲಾ ಅವರು ಜಾಸು, ಮೋನಿಕಾ ಹಾಗೂ ಮಗನೊಂದಿಗೆ ನಲ ಸೋಪಾರದ ಹನುಮಾನ್ ನಗರದಲ್ಲಿ ವಾಸಿಸುತ್ತಿದ್ದರು.

ಬೃಹನ್‍ಮುಂಬೈ ಮುನ್ಸಿಪಲ್ ಕಾರ್ಪೋರೇಷನ್(ಬಿಎಂಸಿ)ಯಲ್ಲಿ ಕೆಲಸ ಮಾಡುತ್ತಿದ್ದ ವಘೇಲಾ ಅವರಿಗೆ ಕೆಲಸದ ಒತ್ತಡ ಹೆಚ್ಚಿತ್ತು. ಜುಲೈ ತಿಂಗಳಲ್ಲಿ ವಘೇಲಾ ಅವರಿಗೆ 4 ಲಕ್ಷ ರೂ.ಗಳ ಚೆಕ್ ಬಂದಿರುವುದು ತನಿಖೆಯಿಂದ ತಿಳಿದು ಬಂದಿದೆ. ಆದರೆ ವಘೇಲಾ ಚೆಕ್ ಬ್ಯಾಂಕ್‍ಗೆ ಹಾಕಿ ಹಣ ಪಡೆದಿರಲಿಲ್ಲ. ಇದೇ ವಿಚಾರವಾಗಿ ವಾದ ನಡೆದಿದೆ. ಅಲ್ಲದೆ ವಘೇಲಾ ತನ್ನ ಪತ್ನಿ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕೆ ವ್ಯಕ್ತಪಡಿಸಿದ್ದರು.

police 1 e1585506284178 4 medium

ಆಗಸ್ಟ್ 27ರಂದು ಇದೇ ವಿಚಾರವಾಗಿ ಪತ್ನಿ, ಮಗಳು ಹಾಗೂ ವಘೇಲಾ ನಡುವೆ ಜಗಳ ನಡೆದಿದ್ದು, ಇದು ತಾರಕಕ್ಕೇರಿದೆ. ಈ ವೇಳೆ ಪತ್ನಿ ಹಾಗೂ ಮಗಳು ಸೇರಿ ವಘೇಲಾ ಮೇಲೆ ಹಲ್ಲೆ ನಡೆಸಿದ್ದಾರೆ. ಜಾಸು ಹಾಗೂ ಮೋನಿಕಾ ಇಬ್ಬರೂ ಸೇರಿ ಕಿಟಕಿಯ ಬಾಗಿಲಿನಿಂದ ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ಕಿಟಕಿಯ ಗಾಜುಗಳು ನಟ್ಟಿದ್ದರಿಂದ ವಘೇಲಾ ತಲೆಗೆ ಗಂಭೀರ ಗಾಯಗಳಾಗಿದ್ದವು.

ಕಥೆ ಕಟ್ಟಿದ ತಾಯಿ-ಮಗಳು:
ತೀವ್ರ ಗಾಯಗೊಂಡ ವಘೇಲಾರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

crime scene

ಈ ಕುರಿತು ಸಹಾಯಕ ಇನ್ಸ್‍ಪೆಕ್ಟರ್ ಕಿಶೋರ್ ಮಾನೆ ಮಾಹಿತಿ ನೀಡಿದ್ದು, ಘಟನೆ ನಡೆದ ವೇಳೆ ವಘೇಲಾ ಮದ್ಯ ಸೇವಿಸಿದ್ದ. ಹೀಗಾಗಿ ಈ ರೀತಿಯಾಗಿದೆ ಎಂದು ಆರೋಪಿ ತಾಯಿ, ಮಗಳು ಹೇಳಿದ್ದಾರೆ. ಮದ್ಯದ ಅಮಲಿನಲ್ಲಿ ವಘೇಲಾ ಕಿಟಕಿಯ ಕದದಿಂದ ತನ್ನನ್ನು ತಾನೇ ಹೊಡೆದುಕೊಂಡಿದ್ದಾನೆ. ಈ ವೇಳೆ ಎದೆಗೆ ಗಾಜು ಚುಚ್ಚಿದೆ ಎಂದು ಪೊಲೀಸರಿಗೆ ವಿವರಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ವೇಳೆ ಸತ್ಯ ಬಯಲಾಗಿದ್ದು, ಕೊಲೆ ಮಾಡಲಾಗಿದೆ ಎಂದು ಖಚಿತವಾಗಿದೆ. ನಂತರ ಪೊಲೀಸರು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಇಬ್ಬರನ್ನೂ ಸೆಪ್ಟೆಂಬರ್ 5ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *