ಕ್ಯಾನ್ಬೆರಾ: ಮಗಳ ಕೋಣೆಯಲ್ಲಿದ್ದ ರಾಶಿ ರಾಶಿ ಜೇಡಗಳನ್ನು ಕಂಡು ತಾಯಿ ಬೆಚ್ಚಿಬಿದ್ದಾಳೆ. ಬಿಳಿಗೋಡೆ ಮೇಲೆ ಹರಿದಾಡುತ್ತಿದ್ದ 100ಕ್ಕೂ ಅಧಿಕ ಜೇಡಗಳ ಫೋಟೋ ಮತ್ತು ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹಂಟ್ಸ್ ಮನ್ ಜೇಡಗಳು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅದು ನೋಡಲು ದೊಡ್ಡ ಗಾತ್ರದ ಜೇಡಗಳಾದ್ದು, ಮಾನವರ ಮೇಲೆ ಹೆಚ್ಚಾಗಿ ಪರಿಣಾಮ ಬೀರುವುದಿಲ್ಲ. ಹಾಗೂ ಈ ಜೇಡಗಳ ಕಾಲು 12 ಇಂಚಿನಷ್ಟಿದ್ದು, ಸಣ್ಣ ಸಣ್ಣ ಕೀಟಗಳನ್ನು ತಿಂದು ಜೀವಿಸುತ್ತವೆ.
ಇತ್ತೀಚೆಗೆ ತಾಯಿಯೊಬ್ಬಳು ತನ್ನ ಮಗಳ ಕೋಣೆಗೆ ಹೋಗಿ ಲೈಟ್ ಆನ್ ಮಾಡಿದ್ದಾಳೆ. ಈ ವೇಳೆ ಕಿಟಕಿ ಚೌಕಟ್ಟಿನ ಮೂಲೆಗಳಲ್ಲಿ ಹರಿದಾಡುತ್ತಿದ್ದ ನೂರಾರು ಬೇಬಿ ಹಂಟ್ಸ್‍ಮನ್ ಜೇಡಗಳನ್ನು ಕಂಡು ಆಶ್ವರ್ಯಗೊಂಡಿದ್ದಾಳೆ. ನಂತರ ಅದನ್ನು ಕದಡಲು ಆರಂಭಿಸಿದ್ದಾಳೆ. ಆದರೆ ಮಗಳು ಜೇಡ ಹುಳುಗಳಿಂದ ಯಾವುದೇ ಅಪಾಯಗಳಾಗುವುದಿಲ್ಲ. ಕೇವಲ 50-60 ಇರಬಹುದು ಅಷ್ಟೇ ಎಂದು ತಿಳಿಸಿದ್ದಾಳೆ. ಆಗ ಮತ್ತೊಂದೆಡೆ ಇರುವ ಮೂಲೆಗಳನ್ನು ನೋಡು ಇನ್ನಷ್ಟು ಜೇಡಗಳ ರಾಶಿ ಇದೆ. ಅದನ್ನು ನೋಡಿದರೆ ಇನ್ನೊಮ್ಮೆ ನೀನು ಜೇಡಗಳನ್ನು ನೋಡಲು ಕೂಡ ಬಯಸುವುದಿಲ್ಲ ಎಂದು ತಾಯಿ ವೀಡಿಯೋನಲ್ಲಿ ಹೇಳುತ್ತಿರುವುದು ಕೇಳಿಸುತ್ತದೆ.
So, for everyone saying it's Photoshopped, here is her actual video. pic.twitter.com/2Zcro0nra7
— ???? Petie R ???????????????????????????????????????????? (@PrinPeta) January 28, 2021
ಜೊತೆಗೆ ನಗುತ್ತಾ…’ನಾವು ಹೊರಗೆ ಹೋಗಿ ಮನೆಯನ್ನು ಸುಟ್ಟು ಹಾಕೋಣವೇ ಆಗ ಜೇಡ ಹೋಗಬಹುದು’ ಎಂದು ಹಾಸ್ಯ ಮಾಡಿದ್ದಾಳೆ. ಗೋಡೆ ಮೇಲೆ ಜೇಡ ತೆವಳುತ್ತಿರುವ ಈ ವೀಡಿಯೋವನ್ನು ಮಹಿಳೆಯ ಸ್ನೇಹಿತೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.