ಉಡುಪಿ: ಸೈನಿಕರೊಬ್ಬರು ತಮ್ಮ ಮಗಳಿಗೆ ಸೈನ್ಯ ಎಂದು ಹೆಸರಿಟ್ಟು ದೇಶಪ್ರೇಮ ಮೆರೆದಿದ್ದಾರೆ. ಸೈನ್ಯದ ಮೇಲಿರುವ ವಿಶೇಷ ಪ್ರೀತಿಯನ್ನು, ಕಾಳಜಿಯನ್ನು ತೋರಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕನ್ನಡ ಅಭಿಮಾನಿಯೊಬ್ಬರು ತಮ್ಮ ಹೆಣ್ಣು ಮಗುವಿಗೆ ಕನ್ನಡ ಅಂತ ನಾಮಕರಣ ಮಾಡಿದ್ದು, ಸುದ್ದಿಯಾಗಿತ್ತು. ಈಗ ಅದೇ ರೀತಿಯಲ್ಲಿ ಉಡುಪಿ ಜಿಲ್ಲೆಯ ಹೆಬ್ರಿಯ ಸೈನಿಕರೊಬ್ಬರು ತಮ್ಮ ಹೆಣ್ಣು ಮಗುವಿಗೆ ಸೈನ್ಯ ಅಂತ ಹೆಸರಿಡುವ ಮೂಲಕ ತಮ್ಮ ವೃತ್ತಿಗೆ ಗೌರವ ಸೂಚಿಸಿದ್ದಾರೆ. ಹೆಬ್ರಿ ತಾಲೂಕಿನ ಆಶಾ- ಪ್ರಶಾಂತ್ ಪೂಜಾರಿ ಅವರು ತಮ್ಮ ಮಗುವಿಗೆ ಸೈನ್ಯ ಅಂತ ಹೆಸರಿಡುವ ಮೂಲಕ ಗಮನ ಸೆಳೆದವರು.
Advertisement
Advertisement
ಹಲವು ವರ್ಷಗಳಿಂದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮಗುವಿನ ತಂದೆ ಪ್ರಶಾಂತ್ ಅವರು ಪ್ರಸ್ತುತ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೇಶ ಹಾಗೂ ಸೈನ್ಯದ ಮೇಲಿನ ವಿಶೇಷ ಅಭಿಮಾನ ಇರುವ ಪ್ರಶಾಂತ್ ಮಗುವಿಗೆ ಸೈನ್ಯ ಹೆಸರಿಡುವ ಮೂಲಕ ವೃತ್ತಿಗೆ ಗೌರವ ತೋರಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Advertisement
ಮುದ್ದು ಕಂದನಿಗೆ ‘ಕನ್ನಡ’ ಹೆಸರಿಟ್ಟ ಕುಂದಾಪುರದ ದಂಪತಿ https://t.co/T2SqDOWv6I#Udupi #Kundapura #Couple #Kannada #Name #KannadaNews
— PublicTV (@publictvnews) October 8, 2020
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸೈನ್ಯಳ ತಂದೆ, ಮಗುವಿಗೆ ಏನು ಹೆಸರಿಡಬೇಕು ಅಂತ ಮಾತುಕತೆಯಾದಾಗ, ಸೈನ್ಯ ಎಂದು ಯಾಕೆ ಹೆಸರಿಡಬಾರದು ಎಂಬ ಆಲೋಚನೆ ಬಂತು. ಪತ್ನಿ ಮತ್ತು ಕುಟುಂಬದವರ ಜೊತೆ ಈ ವಿಚಾರದಲ್ಲಿ ಚರ್ಚೆಗಳು ನಡೆಯಿತು. ಅಂತಿಮವಾಗಿ ಕುಟುಂಬದ ಸದಸ್ಯರಿಂದ ಒಪ್ಪಿಗೆ ಕೂಡ ಸಿಕ್ಕಿತು ಎಂದು ಹೇಳಿದರು.