ಮಗಳಿಗೆ ದುರ್ಗೆಯೆ ಹೆಸರಿಟ್ಟ ವಿರುಷ್ಕಾ

Public TV
2 Min Read
virat

ಮುಂಬೈ: ಜನವರಿ 11 ರಂದು ಅನುಷ್ಕಾ ಮುದ್ದಾದ ಹೆಣ್ಣು ಮಗುವಿನ ಜನ್ಮ ನೀಡಿದ್ದರು. ಇದೀಗ ಅವರ ಮುದ್ದು ಮಗಳಿಗೆ ಹೆಸರನ್ನು ಇಟ್ಟಿರುವ ವಿಚಾರವನ್ನು ಸೋಷಿಲ್ ಮೀಡಿಯಾ ಮೂಲಕವಾಗಿ ರಿವೀಲ್ ಮಾಡಿದ್ದಾರೆ.

ಮುದ್ದು ಮಗಳಿಗೆ ‘ವಮಿಕಾ’ ಎನ್ನುವ ಹೆಸರಿಡುವ ಮೂಲಕವಾಗಿ ನಾಮಕರಣ ಮಾಡಿದ್ದಾರೆ. ತಾಯಿ ದುರ್ಗೆಯೆ ಹೆಸರು ಆಗಿದೆ ಮತ್ತು ವಿರಾಟ್- ಅನುಷ್ಕಾ ಹೆಸರಿನ ಮೊದಲ ಹಾಗೂ ಅಂತ್ಯದ ಅಕ್ಷರ ಜೋಡಿಸಿ ಮಗಳಿಗೆ ಹೆಸರಿಟ್ಟಿದ್ದಾರೆ.

ನಾವಿಬ್ಬರು ಪ್ರೀತಿ, ಕೃತಜ್ಞತೆಯಿಂದ ಬದುಕಿದಂತೆ ನಾವು ವಮಿಕಾಳನ್ನು ಕೂಡ ನಡೆಸಿಕೊಂಡು ಹೋಗುತ್ತೇವೆ. ವಮಿಕಾ ನಮ್ಮ ಜೀವನದಲ್ಲಿ ಬಂದು ಅದೆಲ್ಲವನ್ನು ಮತ್ತೊಂದು ಹಂತಕ್ಕೆ ತಂದಿದ್ದಾಳೆ. ಕೆಲವೊಂದು ಸಂದರ್ಭದಲ್ಲಾದರೂ ಅಳು, ನಗು, ಚಿಂತೆ, ಆನಂದ ಭಾವನೆಗಳನ್ನು ಅನುಭವಿಸಿದ್ದೇವೆ. ಇತ್ತೀಚೆಗೆ ನಿದ್ದೆ ಕಡಿಮೆಯಾಗಿದೆ, ಆದರೆ ಹೃದಯ ತುಂಬಿದೆ. ನಿಮ್ಮೆಲ್ಲರ ಆಶಿರ್ವಾದ ಶುಭಾಶಯ, ಪ್ರೀತಿಗೆ ಧನ್ಯವಾದಗಳು ಎಂದು ಬರೆದು ತಮ್ಮ ಮಗುವಿನ ಜೊತೆಗೆ ದಂಪತಿ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಅಭಿಮಾನಿಗಳಿಗಾಗಿ ತಮ್ಮ ಮದುವೆ ವಿಚಾರದಿಂದ ಹಿಡಿದು ಅವರ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕವಾಗಿ ತಿಳಿಸುವ ಈ ಜೋಡಿ ಮುದ್ದು ಮಗಳಿಗೆ ಯಾವ ಹೆಸರು ಇಡುತ್ತಾರೆ ಎಂಬ ಕುರಿತಾಗಿ ಚರ್ಚೆ ನಡೆಯುತ್ತಿತ್ತು. ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಈಗ ಮಗಳ ಜೊತೆಗಿರುವ ಫೋಟೋ ಜೊತೆಗೆ ಹೆಸರನ್ನು ಕೂಡ ರಿವೀಲ್ ಮಾಡಿದ್ದಾರೆ. ತಂದೆ-ತಾಯಿಗಳಾಗಿ ಬಡ್ತಿ ಪಡೆದಿರುವ ವಿರುಷ್ಕಾ ದಂಪತಿ ಮಗಳಿಗೆ ಹೆಸಟ್ಟ ವಿಚಾರವನ್ನು ಟ್ವಿಟ್ಟರ್, ಇನ್‍ಸ್ಟಾಗ್ರಾಮ್ ಮೂಲಕವಾಗಿ ಹಂಚಿಕೊಂಡು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.

Share This Article