ಮಗಳಿಂದ್ಲೇ ಮಾಜಿ ಶಾಸಕನ ಅಂತ್ಯಕ್ರಿಯೆ- ನೆರೆದಿದ್ದವರು ಕಣ್ಣೀರು

Public TV
1 Min Read
CNG 2 1

ಚಾಮರಾಜನಗರ: ಕೊರೊನಾ ಸೋಂಕಿನಿಂದ ಇಂದು ಮೃತಪಟ್ಟ ಚಾಮರಾಜನಗರದ ಮಾಜಿ ಶಾಸಕ ಸಿ.ಗುರುಸ್ವಾಮಿ ಅವರ ಅಂತ್ಯಕ್ರಿಯೆಯನ್ನು ಅವರ ಪುತ್ರಿಯೇ ಪಿಪಿಇ ಕಿಟ್ ಧರಿಸಿ ನೆರವೇರಿಸಿದ್ದಾರೆ.

ಮೃತ ಮಾಜಿ ಶಾಸಕ ಸಿ.ಗುರುಸ್ವಾಮಿ ಅವರ ಅಂತ್ರಕ್ರಿಯೆ ಚಾಮರಾಜನಗರ ತಾಲೂಕು ಯಾನಗಳ್ಳಿಯ ಅವರ ತೋಟದಲ್ಲಿ ನಡೆಯಿತು. ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅವರ ಪುತ್ರಿ ನಾಗಶ್ರೀ ಪ್ರತಾಪ್ ಪಿಪಿಇ ಕಿಟ್ ಧರಿಸಿ ಅಪ್ಪನ ಅಂತ್ಯಕ್ರಿಯೆ ನೆರವೇರಿಸಿದರು.

CNG 1 3 medium

ಆಜಾದ್ ಹಿಂದೂ ಸೇನೆ ಕಾರ್ಯಕರ್ತರು ಸಾಥ್ ನೀಡಿದರು. ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುತ್ತಾ ಕೊರೊನಾ ವಾರಿಯರ್ ಆಗಿ ದುಡಿಯುತ್ತಿರುವ ನಾಗಶ್ರೀ ಪ್ರತಾಪ್ ಅವರು ಇಂದು ತಮ್ಮ ತಂದೆಯ ಅಂತ್ಯಕ್ರಿಯೆ ನೆರವೇರಿಸಿದ್ದು ಹೃದಯಸ್ಪರ್ಶಿ ಸನ್ನಿವೇಶಕ್ಕೆ ಕಾರಣವಾಗಿ ನೆರದಿದ್ದವರಲ್ಲಿ ಕಣ್ಣೀರು ತರಿಸಿತು.

c guruswamy medium

Share This Article