– ಅತಿಥಿಗಳಲ್ಲಿ 15 ಮಂದಿಗೆ ಕೊರೊನಾ ದೃಢ
– ಸೋಂಕಿತರ ಖರ್ಚಿಗಾಗಿ ರಾಜ್ಯ ಸರ್ಕಾರ ದಂಡ
ಜೈಪುರ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರ ಅನೇಕ ನಿರ್ಬಂಧವನ್ನು ಹೇರಿದೆ. ಆದರೂ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಕುಟುಂಬವೊಂದು ಮದುವೆಗೆ 50ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಿದ್ದರು. ಇದಕ್ಕಾಗಿ 6.26 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಡಾಡಾ ಮೊಹಲ್ಲಾ ನಿವಾಸಿ ಘಿಸುಲಾಲ್ ರತಿ ಜೂನ್ 13 ರಂದು ತಮ್ಮ ಮಗನ ಮದುವೆಗೆ ಒಂದು ಸಮಾರಂಭವನ್ನು ಏರ್ಪಡಿಸಿದ್ದರು. ಈ ಸಮಾರಂಭಕ್ಕೆ 50ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಿದ್ದರು. ಈ ಮೂಲಕ ಘಿಸುಲಾಲ್ ರತಿ ಸರ್ಕಾರ ಕೋವಿಡ್-19 ನಿರ್ವಹಣೆಗೆ ಆದೇಶಿಸಿದ್ದ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
Advertisement
Advertisement
ಕಾರ್ಯಕ್ರಮದ ನಂತರ 15 ಅತಿಥಿಗಳಲ್ಲಿ ಕೊರೊನಾ ಇರುವುದು ದೃಢವಾಗಿದೆ. ಅಲ್ಲದೇ ಅವರಲ್ಲಿ ಒಬ್ಬ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಭಟ್ ತಿಳಿಸಿದ್ದಾರೆ.
Advertisement
ಈ ಸಂಬಂಧ ಜೂನ್ 22 ರಂದು ರತಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.
Advertisement
ಕೊರೊನಾ ಪಾಸಿಟಿವ್ ಬಂದ ರೋಗಿಗಳಿಗೆ ಐಸೋಲೇಷನ್ ವಾರ್ಡ್, ಕ್ವಾರಂಟೈನ್ ಸೌಲಭ್ಯ, ಆಹಾರ, ಅಂಬುಲೆನ್ಸ್ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರವು 6,26,600 ರೂಪಾಯಿಯನ್ನು ದಂಡವಾಗಿ ವಿಧಿಸಲಾಗಿದೆ. ಆ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡುವಂತೆ ಕುಟುಂಬಕ್ಕೆ ತಿಳಿಸಲಾಗಿದೆ ಎಂದು ಭಟ್ ಹೇಳಿದ್ದಾರೆ.