ಮಡಿಕೇರಿ: ಅನಾರೋಗ್ಯದಿಂದ ಮೃತಪಟ್ಟ ಮಗನ ಅಂತ್ಯಸಂಸ್ಕಾರಕ್ಕೂ ಮುನ್ನವೇ ತಂದೆ ಮೃತಪಟ್ಟ ಘಟನೆ ಕೊಡಗು ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪದಲ್ಲಿ ನಡೆದಿದೆ.
ಗ್ರಾಮದ ಜ್ಯೂಸ್ ಫ್ಯಾಕ್ಟರಿ ಹಿಂಭಾಗದ ಬಾಡಿಗೆ ಮನೆಯಲ್ಲಿ ವಾಸವಿದ್ದ ಕಾಫಿ ತೋಟದ ಎಸ್ಟೇಟ್‍ನಲ್ಲಿ ಚಾಲಕ ವೃತ್ತಿಯಲ್ಲಿ ತೊಡಗಿಸಿಕೊಂಡ ವ್ಯಕ್ತಿ ಕೆಲವು ವರ್ಷಗಳಿಂದ ಗೋಣಿಕೊಪ್ಪ ಜ್ಯೂಸ್ ಫ್ಯಾಕ್ಟರಿಯ ಹಿಂಬಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಇಂದು ಅವರ ಮಗ ಸಜೀಶ್(37) ಅನಾರೋಗ್ಯದಿಂದ ನಿಧನರಾದರು. ಮಗನ ಅಂತ್ಯಕ್ರಿಯೆ ಸಂದರ್ಭದಲ್ಲಿ ಭಾಗಿಯಾಗಿದ ರಾಜನ್ (70)ರವರು ಮೃತಪಟ್ಟಿದ್ದಾರೆ. ಬಳಿಕ ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಕೊರೊನಾ ಪರಿಶೀಲನೆ ಮಾಡಿದಾಗ ಮರಣ ಹೊಂದಿದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವುದು ಕಂಡು ಬಂದಿದೆ.
ಬಳಿಕ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಸಮಾಜ ಸೇವಕರಾದ ಶರತ್ ಕಾಂತ್ ನೇತೃತ್ವದಲ್ಲಿ ಹಿಂದೂ ರುದ್ರ ಭೂಮಿಯಲ್ಲಿ ಸರ್ಕಾರ ಮಾರ್ಗ ಸೂಚಿಯನ್ನು ಪಾಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.