ಮಡಿಕೇರಿ: ಮಗನನ್ನ ತಾಯಿಯೇ ಅಪಹರಣ ಮಾಡಿಸಿದ ಘಟನೆ ಕೊಡಗು ಜಿಲ್ಲೆ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರದ ಕಾಳಮ್ಮ ಕಾಲೋನಿಯಲ್ಲಿರುವ ಶ್ರೀನಿವಾಸ್ ಎಂಬವರು ಪತ್ನಿ ಶೋಭಾ ತನ್ನ ಮಗನನ್ನು ಕಿಡ್ನ್ಯಾಪ್ ಮಾಡಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಶ್ರೀನಿವಾಸ್ ಶೋಭಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ್ಮೇಲೆ ಇಬ್ಬರು ಮಕ್ಕಳು ಇವರ ಬಾಳಿನಲ್ಲಿ ಬಂದಿದ್ದಾರೆ. ಇಬ್ಬರ ನಡುವಿನ ವೈಮನಸ್ಸಿನಿದ್ದಾಗಿ ವಿಚ್ಛೇಧನ ಕೇಳಿ ಶೋಭಾ 2017ರಲ್ಲಿ ನ್ಯಾಯಾಲಯದ ಮೊರ ಹೋಗಿದ್ದರು. ಅಂದಿನಿಂದ ಇಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದಾರೆ.
ಮಗ ತಂದೆಯ ಬಳಿಯಲ್ಲಿದ್ದ ಮಗನನ್ನು ತಾಯಿ ಸಂಬಂಧಿಕರ ಮೂಲಕ ಅಪಹರಣ ಮಾಡಿಸಿರುವ ಆರೋಪ ಕೇಳಿ ಬಂದಿದೆ. ಹೆಂಡತಿ ದೂರವಾಗಿದ್ದರೂ, ಜೊತೆಗಿದ್ದ ಮಗನನ್ನು ಪ್ರೀತಿಯಿಂದ ಸಾಕುತ್ತಿದ್ದೆ. ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸುತ್ತಿದ್ದೆ. ಆದರೆ ಹೆತ್ತ ತಾಯಿಯೇ ಬೇರೆ ಹುಡುಗರನ್ನು ಬಳಸಿಕೊಂಡು ಕಿಡ್ನ್ಯಾಪ್ ಮಾಡಿಸಿದ್ದಾರೆ. ನನ್ನ ಮಗನನ್ನು ಹುಡುಕಿಕೊಡಿ ಸ್ವಾಮಿ ಎಂದು ಮಗುವಿನ ತಂದೆ ಶ್ರೀನಿವಾಸ್ ಕಣ್ಣೀರಿಡುತ್ತಿದ್ದಾರೆ.
ಶೋಭಾ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಬ್ಯೂಟಿ ಪಾರ್ಲರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಸದ್ಯ ಮಗು ತಾಯಿ ಜೊತೆ ಕೆ.ಆರ್.ಪೇಟೆಯಲ್ಲಿದೆ. ಇತ್ತ ಶೋಭಾ ಬಾವ ವೆಂಕಟೇಶ್ ಮಾತ್ರ ಮಗುವನ್ನು ಕಿಡ್ನ್ಯಾಪ್ ಮಾಡಿಲ್ಲ. ಸಂಬಂಧಿಕರ ಜೊತೆ ಮಗು ಹೋಗಿದೆ. ಶ್ರೀನಿವಾಸ್ ಗೆ ಹುಡುಗಿಯರ ಚಪಲವಿದೆ. ಆದ್ದರಿಂದ ಶೋಭಾ ಪತಿಯನ್ನು ಬಿಟ್ಟು ಹೋಗಿರೋದು. ಮೊದಲ ಪತ್ನಿ ಇರುವಾಗಲೇ ಶ್ರೀನಿವಾಸ್ ಎರಡನೇ ಮದುವೆ ಸಹ ಆಗಿದ್ದಾನೆ ಎಂದು ಹೇಳುತ್ತಾರೆ.