ಧಾರವಾಡ: ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀಳುತ್ತದೆ ಎಂಬುದನ್ನು ನಿರ್ದಿಷ್ಟಕಾರಣಗಳಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಕುರಿತಾಗಿ ತಜ್ಞರ ವರದಿ ನೋಡಿಕೊಂಡು ಏನು ತಯಾರಿ ಮಾಡಬೇಕು ಅದನ್ನ ಸರ್ಕಾರ ಮಾಡಲಿದೆ. ಇಂದು ತಜ್ಞರು ಮಾಹಿತಿಯನ್ನು ಕೊಟ್ಟಿರಬಹುದು. ಮಕ್ಕಳ ಮೇಲೆ ಮೂರನೇ ಅಲೇ ಪರಿಣಾಮ ಬಿರುತ್ತೆ ಎನ್ನುವುದಕ್ಕೆ ಯಾವುದೇ ಕಾರಣ ಇಲ್ಲ. ಮಕ್ಕಳಿಗೆ ನಾವು ವ್ಯಾಕ್ಸಿನ್ ಹಾಕಿಲ್ಲ, ಹೀಗಾಗಿ ಮಕ್ಕಳ ಮೇಲೆ ಸೋಂಕು ಪರಿಣಾಮ ಬೀರುತ್ತದೆ ಎಂಬ ಅಂದಾಜು ಇರಬಹುದು ಎಂದಿದ್ದಾರೆ. ಇದನ್ನೂ ಓದಿ: ಸಿಎಂ ಖುರ್ಚಿಗಾಗಿ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಈಗಲೇ ಕುಸ್ತಿ ಶುರುವಾಗಿದೆ: ಕಾರಜೋಳ
18 ವರ್ಷದ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಆರಂಭ ಮಾಡಿದ್ದೇವೆ, ಉಳಿದವರಿಗೆ ಕೂಡಾ ವ್ಯಾಕ್ಸಿನ್ ನೀಡಲಾಗುತ್ತಿದೆ. ಮಕ್ಕಳಿಗೆ ವ್ಯಾಕ್ಸಿನ್ ಹಾಕಿಲ್ಲ, ಹೀಗಾಗಿ ಮಕ್ಕಳಿಗೆ ಕೊರೊನಾ ಬರಬಹುದು ಎಂದು ಊಹೆ ಇರಬಹುದು, ಮಕ್ಕಳಿಗೆನೇ ಮೂರನೇ ಅಲೆಯಲ್ಲಿ ಕೊರೊನಾ ಬರಲಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಕಾರಣ ಇಲ್ಲಾ ಎಂದು ಈ ವೇಳೆ ಕಾರಜೋಳ ಹೇಳಿದರು.