ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟಿಯಾಗಿರುವ ಮುದ್ದು ಮೊಗದ ಚೆಲುವೆ ಅದಿತಿ ಪ್ರಭುದೇವ ಶಾಲಾ ಮಕ್ಕಳ ಜೊತೆಯಲ್ಲಿ ಜೂಟಾಟ ಆಡಿದ್ದಾರೆ. ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ.
ಸರ್ಕಾರಿ ಶಾಲೆಯ ಮಕ್ಕಳ ಜೊತೆಗೆ ಒಂಟಿಕಾಲಿನ ಆಟವಾಡುತ್ತಾ ಮಕ್ಕಳ ಜೊತೆಗೆ ಸಮಯ ಕಳೆದಿದ್ದಾರೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎಷ್ಟೆಲ್ಲ ನೆನಪುಗಳು ಶೂಟಿಂಗ್ ಬಿಡುವಿನ ಸಮಯದಲ್ಲಿ, ಹಳ್ಳಿ ಸೊಗಡಿನ ಮುಗ್ಧ ನಗುಗಳ ಜೊತೆಯಲ್ಲಿ ಆಟವಾಡಿ ಕಾಲ ಕಳೆದ ಈ ಸಂತೋಷಕ್ಕೆ ಬೆಲೆ ಕಟ್ಟಲಾದೀತೆ? ನನಗೆ ಹತ್ತು ವರ್ಷಗಳ ಹಿಂದೆ ಹೋದಂತೆ ಭಾಸವಾಯಿತ್ತು. ಜೊತೆಗೆ ಹೆಚ್ಚು ಕಡಿಮೆ ಶಾಲಾ ಉಡುಪು ಕೂಡಾ ಈ ಶಾಲಾ ಮಕ್ಕಳ ಯೂನಿಫಾರ್ಮ್‍ನಂತೆ ಇತ್ತು ಎಂದು ಬರೆದುಕೊಂಡು ಸಂತೋಷವನ್ನು ಅಪ್ಪಟ ಕನ್ನಡ ಹುಡುಗಿ ಅದಿತಿ ಪ್ರಭುದೇವ ಹಂಚಿಕೊಂಡಿದ್ದಾರೆ.
View this post on Instagram
ಮಕ್ಕಳ ಜೊತೆಗೆ ಆಟವಾಡುತ್ತಾ ತಾವು ಮಕ್ಕಳಂತೆ ಸಂತೋಷವಾಗಿ ಕೆಲ ಸಮಯ ಕಳೆದಿದ್ದಾರೆ. ಅದಿತಿ ಮಕ್ಕಳ ಜೊತೆಯಲ್ಲಿ ಆಟವಾಡುತ್ತಾ ಬಾಲ್ಯಕ್ಕೆ ಜಾರಿ ತಮ್ಮ ಶಾಲಾ ದಿವನ್ನು ನೆನೆಪಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ವೀಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿತ್ತಿದ್ದಾರೆ. ನೆಟ್ಟಿಗರು ಅದಿತಿ ಆಟವಾಡುತ್ತಿರುವುದನ್ನು ಕಂಡು ಕಮೆಂಟ್‍ಗಳ ಸುರಿಮಳೆಗೈದಿದ್ದಾರೆ.
ಸದ್ಯ ತೋತಾಪುರಿ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ಅದಿತಿ ಕೊಂಚ ಸಮಯ ಬಿಡುವು ಮಾಡಿಕೊಂಡು ಹಳ್ಳಿ ಶಾಲಾ ಮಕ್ಕಳ ಜೊತೆಗೆ ಆಟವಾಡಿದ್ದಾರೆ. ಆಟದ ಫೋಟೋ. ವೀಡಿಯೋವನ್ನು ಕ್ಲಿಕ್ಕಿಸಿಕೊಂಡ ಅದಿತಿ ಪ್ರಭುದೇವ ತಮ್ಮ ಬಾಲ್ಯದ ನೆನಪುಗಳನ್ನು ಮೆಲಕು ಹಾಕಿದ್ದಾರೆ.