ಧಾರವಾಡ: ಮಕ್ಕಳಿಗಾಗಿ ರೈಲಿನ ಬೋಗಿಯಂತಿರುವ ಶಾಲೆಯನ್ನು ಬಡಾವಣೆಯ ಜನರು ನಿರ್ಮಾಣ ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಧಾರವಾಡದ ದುರ್ಗಾ ಕಾಲನಿಯಲ್ಲಿರುವ ಕಿರಿಯ ಪ್ರಾಥಮಿಕ ಶಾಲೆ ಈಗ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಮಕ್ಕಳಿಗೆ ಈ ಪುಟ್ಟ ಸರ್ಕಾರಿ ಶಾಲೆಯೇ ತಮ್ಮ ಶೈಕ್ಷಣಿಕ ಭವಿಷ್ಯ ರೂಪಿಸಲು ಬಹುದೊಡ್ಡ ಆಧಾರವಾಗಿದೆ. ಹೀಗಾಗಿ ಈ ಶಾಲೆಯ ಅಭಿವೃದ್ಧಿಗೆ ಆಧಾರವಾಗಿ ಬಡಾವಣೆಯ ಜನರು ನಿಂತಿದ್ದಾರೆ.
Advertisement
Advertisement
ಈ ಶಾಲೆಗೆ ಹತ್ತು ವರ್ಷದಿಂದ ವಿದ್ಯುತ್ ಸಂಪರ್ಕ ಇರಲಿಲ್ಲ. ಈಗ ರವೀಂದ್ರ ಯಲಿಗಾರ ಅವರು ಬಣ್ಣ ಮಾಡಿಸಿ ವಿದ್ಯುತ್ ಕೂಡಾ ಹಾಕಿಸಿದ್ದಾರೆ. ಈ ಶಾಲೆಗೆ ಇದೇ ಬಡಾವಣೆಯ ಶಂಕ್ರಯ್ಯ ಹಿರೇಮಠ ಜಮೀನು ಕೊಟ್ಟು ಶಾಲಾ ನಿರ್ಮಾಣಕ್ಕೆ ಸಹಕರಿಸಿದ್ದಾರೆ.
Advertisement
Advertisement
ಮೊದಲು ಈ ಶಾಲೆ ದುರ್ಗಾ ಕಾಲೋನಿಯ ಸಣ್ಣ ಮನೆಯಲ್ಲಿ ನಡೆಯುತಿತ್ತು. ಆದರೆ ಮಕ್ಕಳಿಗಾಗಿ ಇಲ್ಲಿರುವ ಜನರೆಲ್ಲ ಸೇರಿ ಮೂರು ಕೊಠಡಿಯ ಶಾಲೆಯನ್ನು ನಿರ್ಮಾಣ ಮಾಡಿದ್ದಾರೆ. ರೈಲಿನ ಬೋಗಿಯಂತಿರುವ ಬಣ್ಣ ಮಾಡಿ, ಮಕ್ಕಳನ್ನ ಶಾಲೆಗೆ ಬರಲು ಸೆಳೆಯುವಂತೆ ಮಾಡಲಾಗಿದೆ. ಹೀಗಾಗಿ ಶಾಲಾ ಮಕ್ಕಳಿಗೆ ಇದು ಒಂದು ರೀತಿಯಾಗಿ ಟ್ರೆನ್ ಆಗಿ ಬಿಟ್ಟಿದೆ.
ಚಿಕ್ಕ ಜಾಗದಲ್ಲೇ ಮಾದರಿ ಶಾಲೆ ನಿರ್ಮಾಣ ಮಾಡೊಣ ಎಂದು ಕೆಲಸ ಮಾಡಲಾಗುತ್ತಿದೆ. ಒಂದು ಕೊಠಡಿಯಲ್ಲಿ ಅಂಗನವಾಡಿ ನಡೆಸುತ್ತಿದ್ದಾರೆ. ಉಳಿದ ಎರಡು ಕೊಠಡಿಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆ ನಡೆಸಲಾಗುತ್ತಿದೆ. ಸದ್ಯ ಕಿರಿಯ ಪ್ರಾಥಮಿಕ ಶಾಲೆ ಆರಂಭ ಇಲ್ಲದೇ ಇದ್ದರೂ ಮಕ್ಕಳು ಮಾತ್ರ ಇಲ್ಲಿಗೆ ಬಂದು ಟ್ರೆನ್‍ನಲ್ಲಿ ಹತ್ತುವಂತೆ ಆಟವಾಡುವುದರ ಜೊತೆಯಲ್ಲಿ ಪಾಠ ಕಲಿತು ಹೋಗುತ್ತಿದ್ದಾರೆ.