ಬೆಂಗಳೂರು: ಕೋವಿಡ್ 19ನಿಂದ ಸ್ಥಗಿತಗೊಂಡಿರುವ ಶಾಲೆಗಳನ್ನು ತೆರೆಯಬಹುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸು ಮಾಡಿದೆ.
ಶಾಲೆಗಳನ್ನು ಆರಂಭಿಸುವ ಮುನ್ನ ಪೋಷಕರೊಂದಿಗೆ ಹಾಗೂ ಎಸ್.ಡಿ.ಎಂ.ಸಿ ಗಳೊಂದಿಗೆ ಪೂರ್ವಭಾವಿ ಸಭೆಯನ್ನು ನಡೆಸಬೇಕು. ಎಸ್.ಡಿ.ಎಮ್.ಸಿ ಮತ್ತು ಗ್ರಾಮ ಪಂಚಾಯತ್‌ಗಳ ಸಹಕಾರದಿಂದ ಎಲ್ಲಾ ಶಾಲೆಗಳ ಕೊಠಡಿಗಳ ಹಾಗೂ ಪೀಠೋಪಕರಣಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಕಡ್ಡಾಯವಾಗಿ ಸ್ಯಾನಿಟೈಸೇಷನ್ ಮಾಡಬೇಕು ಎಂದು ಶಿಫಾರಸು ಮಾಡಿದೆ.
Advertisement
ಶಿಫಾರಸಿನಲ್ಲಿ ಏನಿದೆ?
ಲಭ್ಯವಿರುವ ಸಂಶೋಧನೆಯ ಪ್ರಕಾರ ಶಾಲೆಗಳನ್ನು ತೆರೆಯುವುದು ಸಮಸ್ಯೆಯಲ್ಲ. ಏಕೆಂದರೆ ಬೇರೆ ಕಾಯಿಲೆ ಇತಿಹಾಸ ಇರುವವರಿಗೆ ಹೋಲಿಸಿದರೆ ಮಕ್ಕಳು ಹೆಚ್ಚಿನ ವಯಸ್ಸಾದವರಿಗೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ.
Advertisement
Advertisement
ಈ ಅಂಶಗಳ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸಬೇಕು.
– ಶಾಲೆಯಲ್ಲಿರುವ ಎಲ್ಲ ಶೌಚಾಲಯಗಳನ್ನು ಸ್ವಚ್ಛವಾಗಿ ಶುದ್ಧಗೊಳಿಸಬೇಕು.
– ನೀರಿನ ತೊಟ್ಟಿ ಮತ್ತು ವಾಷ್ ಬೇಸಿಂಗ್‌ಗಳನ್ನು ಕ್ಲೋರಿನ್ ದ್ರಾವಣದಿಂದ ಸ್ವಚ್ಛಗೊಳಿಸಬೇಕು.
– ಶೌಚಾಲಯಗಳು ರಿಪೇರಿ ಇರುವುದು ಕಂಡು ಬಂದಲ್ಲಿ ದುರಸ್ತಿಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು.
– ಕೈ ತೊಳೆಯಲು ಅಗತ್ಯ ಸಾಬೂನು ಮತ್ತು ನಿರಂತರ ನೀರಿನ ಸೌಲಭ್ಯವನ್ನು ಖಾತರಿಪಡಿಸಿಕೊಳ್ಳಬೇಕು.
– ಎಲ್ಲ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ 11 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕಡ್ಡಾಯವಾಗಿ ಗುಣಮಟ್ಟದ ಮಾಸ್ಕ್ ಒದಗಿಸುವ ವ್ಯವಸ್ಥೆಯಾಗಬೇಕು.
– ದೈಹಿಕ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಈ ಬಗ್ಗೆ ಶಿಕ್ಷಕರು ಗಮನ ಹರಿಸಬೇಕು.
– ಶಾಲಾ ಆವರಣ ಗಳನ್ನು ಪೂರ್ಣವಾಗಿ ಸೋಂಕು ನಿವಾರಣೆ ಗೊಳಿಸಬೇಕು.
Advertisement
ಮಕ್ಕಳಿಗೆ ಒದಗಿಸಬೇಕಾದ ಅವಶ್ಯಕತೆಗಳು
– ಶುಚಿತ್ವ ದಿಂದ ಕೂಡಿದ ಬೆಳಗಿನ ಬಿಸಿ ಹಾಲು ಮತ್ತು ಮಧ್ಯಾಹ್ನದ ಪೌಷ್ಟಿಕಯುಕ್ತ ಬಿಸಿಯೂಟವನ್ನು ಮಕ್ಕಳಿಗೆ ಒದಗಿಸಬೇಕು.
– ಉಚಿತ ಕೋವಿಡ್ ಎಚ್ಚರಿಕೆ ಸಾಧನಗಳನ್ನು ಪೂರೈಕೆ ಮಾಡಬೇಕು.
– ಆಹಾರದ ಜೊತೆ ಮಕ್ಕಳಿಗೆ ರೋಗ ನಿರೋಧಕ ಮಾತ್ರೆಗಳನ್ನು ನೀಡಬೇಕು.
– ಆರೋಗ್ಯ ತಪಾಸಣಾ ಕೈಗೊಳ್ಳಬೇಕು. ಎಲ್ಲಾ ಮಕ್ಕಳಿಗೆ ಆರೋಗ್ಯ ಪರೀಕ್ಷೆಯನ್ನು ನಿಯಮಿತವಾಗಿ ಕೈಗೊಳ್ಳಬೇಕು.
– ರಾಜ್ಯಾದ್ಯಂತ ಶಿಕ್ಷಕರು ಹಾಗೂ ಮಕ್ಕಳಿಗೆ ಮಾದರಿ ಪರೀಕ್ಷೆ ನಡೆಸಬೇಕು. ಸೋಂಕು ಕಂಡು ಬಂದಲ್ಲಿ ತಕ್ಷಣ ವೈದ್ಯಕೀಯ ಸೇವೆಯನ್ನು ಒದಗಿಸಬೇಕು.
– ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆಯಾಗಬೇಕು.
– ಮಕ್ಕಳ ಶೂ, ಶಾಲಾ ಬ್ಯಾಗ್‌ಗಳನ್ನು ಇಡಲು ಒಂದು ಪ್ಯಾಕ್ ವ್ಯವಸ್ಥೆಯನ್ನು ಮಾಡಬೇಕು.
ಶಿಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿಗಳು
– ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಒಳಪಡಬೇಕು.
– ಶಾಲೆಗೆ ಆಗಮಿಸಿದ ವ್ಯಕ್ತಿಗಳ ಮಾಹಿತಿಯ ಪುಸ್ತಕವನ್ನು ಕಡ್ಡಾಯವಾಗಿ ನಿರ್ವಹಿಸಬೇಕು.
– ಶಾಲೆಗೆ ಆಗಮಿಸಿದ ಯಾವುದೇ ವ್ಯಕ್ತಿಯು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಬೇಕೆಂದು ಸೂಚನಾ
ಫಲಕದಲ್ಲಿ ಬರೆಸಬೇಕು.
– ಶಿಕ್ಷಕರು ಬೋಧನೆ ಮಾಡುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು.
– ಗುಂಪು ಚಟುವಟಿಕೆ ಹಾಗೂ ವೈಯಕ್ತಿಕ ಚಟುವಟಿಕೆಗಳಿಗೆ ಸಾಮಾಜಿಕ ಅಂತರಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು.
ಮಧ್ಯಾಹ್ನದ ಬಿಸಿಯೂಟ ನಿರ್ವಹಣೆ
– ಬಿಸಿಯೂಟಕ್ಕಾಗಿ ಇರುವ ಅಡುಗೆ ಕೋಣೆಯನ್ನು ಸ್ವಚ್ಛ ಮಾಡಬೇಕು.
– ಅಡುಗೆ ಮಾಡುವ ಸಾಮಗ್ರಿ ಗಳನ್ನು ಸ್ವಚ್ಛವಾಗಿ ತೊಳೆಯಬೇಕು.
– ಅಡುಗೆ ಮಾಡುವ ಸಿಬ್ಬಂದಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಅವರಿಗೆ ಯಾವುದೇ ರೀತಿಯ ಗುಣ ಲಕ್ಷಣಗಳು ಕಂಡು ಬರದೆ ಇದ್ದಲ್ಲಿ ಅವರ ಸೇವೆಯನ್ನು ಪಡೆಯಬಹುದಾಗಿದೆ.
– ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ, ಗ್ಲೌಸ್ ಧರಿಸಿರಬೇಕು ಹಾಗೂ ಆಗಾಗ ತೊಳೆಯುತ್ತಿರಬೇಕು.
– ಅಡುಗೆ ಸಿಬ್ಬಂದಿಗಳಿಗೆ ವೈಯಕ್ತಿಕ ಸ್ವಚ್ಛತೆಯ ಕುರಿತು ಮಾರ್ಗದರ್ಶನ ನೀಡಬೇಕು.