ಬಳ್ಳಾರಿ: ಗಣಿ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಸಮತಾ ರೆಸಾರ್ಟಿನಲ್ಲಿ ಭಾನುವಾರ ಅಪರೂಪದ ಮಂತ್ರ ಮಾಂಗಲ್ಯ ಮದುವೆ ನಡೆದಿದೆ.
ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆ ಸೇರಿ ಇನ್ನಿತರೆ ಸಮಾರಂಭಗಳನ್ನ ಸರಳವಾಗಿ ಆಚರಿಸಿಕೊಳ್ಳಬೇಕೆಂಬ ನಿಯಮವನ್ನು ಮಾಡಲಾಗಿದೆ. ಈ ನಿಯಮದ ಅನುಸಾರ ಜೋಡಿಯೊಂದು ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
Advertisement
Advertisement
ಬೆಂಗಳೂರಿನ ಖಾಸಗಿ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿ ತುಳಸಿ ರಾಮ್ ಹಾಗೂ ಕುಮಾರ ಕೆಫೆ ಮಾಲೀಕ ಸತೀಶಕುಮಾರ್ ಅವರ ಹಿರಿಯ ಮಗಳು ದಿವ್ಯ ಭಾರತಿ ಈ ಮಂತ್ರ ಮಾಂಗಲ್ಯದ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಷ್ಟ್ರಕವಿ ಕುವೆಂಪು ಅವರು ತಮ್ಮ ಮಗನಾದ ಪೂರ್ಣಚಂದ್ರ ತೇಜಸ್ವಿಯವರ ಮದುವೆ ಸಮಾರಂಭವನ್ನ ಈ ಮಂತ್ರ ಮಾಂಗಲ್ಯ ಮುಖೇನ ಮಾಡಿಸಿದ್ದರು. ಅದೇ ಶೈಲಿಯಲ್ಲೇ ಈ ಮದುವೆ ಸಮಾರಂಭ ನಡೆಯಿತು.
Advertisement
Advertisement
ರಾಷ್ಟ್ರಕವಿ ಕುವೆಂಪು ಅವರ ಈ ಮಂತ್ರ ಮಾಂಗಲ್ಯದ ವಿಶೇಷತೆ ಏನೆಂದರೆ, ಪುರೋಹಿತರು ವೇದ-ಘೋಷ ಹಾಗೂ ಧಾರ್ಮಿಕ ಸಂಪ್ರದಾಯ ಸೇರಿದಂತೆ ಇತರೆ ಆಚರಣೆಗಳನ್ನು ಮಾಡದೆ, ಕುವೆಂಪು ಅವರು ರಚಿಸಿದ ವಿವಾಹ ಸಂಹಿತೆ ಓದುವ ಮೂಲಕ ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡು ಈ ಜೋಡಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂತಹ ಅಪರೂಪದ ಮದುವೆಗೆ ಆಗಮಿಸಿದವರೆಲ್ಲರಿಗೂ ಕೂಡ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯುಳ್ಳ ಕಿರು ಪುಸ್ತಕ ವಿತರಿಸಲಾಯಿತು. ಅತ್ಯಂತ ಸರಳವಾಗಿ ಊಟದ ವ್ಯವಸ್ಥೆಯನ್ನ ಮಾಡಲಾಗಿತ್ತು.