ಮಂಡ್ಯ: ಕೊರೊನಾ ಕಂಟ್ರೋಲ್ ಮಾಡುವ ಉದ್ದೇಶದಿಂದ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ವಾರ ಕಂಪ್ಲೀಟ್ ಲಾಕ್‍ಡೌನ್‍ನನ್ನು ವಿಸ್ತರಣೆ ಮಾಡಿರುವುದಾಗಿ ಜಿಲ್ಲಾಡಳಿತ ಘೋಷಣೆ ಮಾಡಿದೆ.
Advertisement
ಸದ್ಯ ರಾಜ್ಯದ 11 ಜಿಲ್ಲೆಗಳಲ್ಲಿ ಕೊರೊನಾ ಕಂಟ್ರೋಲ್ ಮಾಡಲು ಲಾಕ್‍ಡೌನ್‍ನ್ನು ವಿಸ್ತರಣೆ ಮಾಡಲಾಗಿದೆ. ಆದರೆ ಮಂಡ್ಯ ಜಿಲ್ಲಾಡಳಿತ ಒಂದು ವಾರ ಕಂಪ್ಲೀಟ್ ಲಾಕ್‍ಡೌನ್‍ನ್ನು ವಿಸ್ತರಣೆ ಮಾಡಿದೆ. ಕಳೆದ ಮೂರು ವಾರಗಳಿಂದ ಜಿಲ್ಲೆಯಲ್ಲಿ ಕಂಪ್ಲೀಟ್ ಲಾಕ್‍ಡೌನ್ ಇತ್ತು, ಇದೀಗ ಮತ್ತೆ ಅದೇ ಮಾದರಿಯಲ್ಲಿ ಒಂದು ವಾರ ಸಂಪೂರ್ಣ ಲಾಕ್‍ಡೌನ್‍ನ್ನು ವಿಸ್ತರಣೆ ಮಾಡಲಾಗಿದೆ. ಇದನ್ನೂ ಓದಿ: ಅತ್ತಿಗೆಯನ್ನು ಕೊಂದು ನೇಣಿಗೆ ಶರಣಾದ ನಾದಿನಿ
Advertisement
Advertisement
ಜೂನ್ 15, 16, 18, 19ರ ದಿನಗಳಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿದೆ. ಈ ದಿನಗಳಲ್ಲಿ ಹಣ್ಣ, ತರಕಾರಿ, ದಿನಸಿ, ಮಾಂಸ, ಮದ್ಯ ಮಾರಾಟಕ್ಕೆ ನಿಷೇಧ ಏರಲಾಗಿದೆ. ಬ್ಯಾಂಕ್, ಅಂಚೆ ಕಚೇರಿ, ಎಲ್‍ಐಸಿ ಕಚೇರಿಗಳು ಸಹ ಸಂಪೂರ್ಣ ಬಂದ್ ಆಗಲಿವೆ. ಮೆಡಿಕಲ್, ಹಾಲಿನ ಅಂಗಡಿ, ಎಟಿಎಂ ಹಾಗೂ ಪೆಟ್ರೋಲ್ ಬಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಇದನ್ನೂ ಓದಿ: ನೀವು ಮನೆಯಲ್ಲೇ ಮಾಡಿ ಚಿಕನ್ ಕುರ್ಮ
Advertisement
ಜೂನ್ 14, 15 ರ ದಿನಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 11 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್‍ನ ಕಡಿ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಈ ನಿರ್ಧಾರಕ್ಕೆ ಬಂದಿದೆ. ಜನರು ಜಿಲ್ಲಾಡಳಿತದ ಆದೇಶವನ್ನು ಪಾಲಿಸಿ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಅಶ್ವಥಿ ಅವರು ಮನವಿ ಮಾಡಿದ್ದಾರೆ.