ಮಂಡ್ಯ: ಕೊರೊನಾ ಕಂಟ್ರೋಲ್‍ಗೆ ಮಂಡ್ಯ ಜಿಲ್ಲಾಡಳಿತ ಸಂಪೂರ್ಣ ಲಾಕ್‍ಡೌನ್ ವಿಸ್ತರಣೆ ಮಾಡಿರುವ ಹಿನ್ನೆಲೆ ಮಂಡ್ಯದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
Advertisement
ನಾಳೆಯಿಂದ ನಾಲ್ಕು ದಿನಗಳ ಕಾಲ ಮಂಡ್ಯ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್‍ಗೊಳಿಸುವುದಾಗಿ ಜಿಲ್ಲಾಡಳಿತ ಘೋಷಣೆ ಮಾಡಿದೆ. ಈ ಹಿನ್ನೆಲೆ ಬೆಳಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಜನರು ಸಾಮಾಜಿಕ ಅಂತರ ಮರೆತು ಜನ ತರಕಾರಿ, ಸೊಪ್ಪು, ಹೂ ಖರೀದಿಸಲು ಮುಂದಾಗಿದ್ದಾರೆ.
Advertisement
Advertisement
ಜಿಲ್ಲಾಡಳಿತ ನಗರದಲ್ಲಿ ಒಂದೇ ಮಾರುಕಟ್ಟೆ ನಿರ್ಮಾಣ ಮಾಡಿರುವ ಕಾರಣ ಇಷ್ಟೊಂದು ಜನರು ಸಾಮಾಜಿಕ ಅಂತರ ಮರೆತು ಖರೀದಿ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಮಂಡ್ಯ ನಗರದ ನಾಲ್ಕೈದು ಕಡೆ ಮಾರುಕಟ್ಟೆ ನಿರ್ಮಾಣ ಮಾಡಿದ್ದರೆ ಇಷ್ಟೊಂದು ಪ್ರಮಾಣದಲ್ಲಿ ಜನರು ಸೇರುತ್ತಿರಲಿಲ್ಲ. ಜಿಲ್ಲಾಡಳಿತ ಮಾಡಿರುವ ಈ ಯಡವಟ್ಟಿನಿಂದ ಮಂಡ್ಯದಲ್ಲಿ ಕೊರೊನಾ ಮಹಾ ಸ್ಟೋಟವಾಗುವ ಸಾಧ್ಯತೆಯಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಬಂದಿದೆ.