– ಆಸ್ಪತ್ರೆಯ ಬೇಜವಾಬ್ದಾರಿಗೆ ಸಾರ್ವಜನಿಕರು ಕಿಡಿ
ಮಂಡ್ಯ: ಕೊರೊನಾ ಅಟ್ಟಹಾಸದಿಂದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್ ಇಲ್ಲ ಅನ್ನೋ ಸಂಖ್ಯೆಯೇ ಹೆಚ್ಚು. ಆದರೆ ಇಲ್ಲೊಂದು ಆಸ್ಪತ್ರೆ ರೋಗಿಗಳಿಗೆ ಯಾಕೆ ನಾವು ಶ್ವಾನಗಳಿಗೂ ಬೆಡ್ ಕೊಡುತ್ತೀವಿ ಬನ್ನಿ ಅನ್ನುತ್ತಿದೆ.
ಹೌದು. ಡಾಕ್ಟರೇ ನಾವು ಬೆಡ್ ಮೇಲೆ ಮಲಗಿದ್ದೇವೆ, ನೀವು ಎಲ್ಲಿ ಹೋಗಿದ್ದೀರಾ ಬಂದು ಟ್ರೀಟ್‍ಮೆಂಟ್ ಕೊಡಿ ಅನ್ನೋ ದೃಶ್ಯ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಕಂಡು ಬಂದಿದೆ.
Advertisement
Advertisement
ಮಂಡ್ಯ ಜಿಲ್ಲೆಯ ಮಿಮ್ಸ್ ಆಸ್ಪತ್ರೆಯ ಬೆಡ್‍ಗಳ ಮೇಲೆ ಸಾಲು ಸಾಲಾಗಿ ನಾಯಿಗಳು ಬೆಚ್ಚಗೆ ಮಲಗಿವೆ. ಈ ಬೀದಿ ನಾಯಿಗಳನ್ನು ಓಡಿಸೋಕೂ ಮಿಮ್ಸ್‍ನಲ್ಲಿ ಸಿಬ್ಬಂದಿ ಇಲ್ವಾ ಅನ್ನೋ ಪ್ರಶ್ನೆ ಎದ್ದಿದೆ. ಮಿಮ್ಸ್ ಆಸ್ಪತ್ರೆಯ ವಾರ್ಡಿನಲ್ಲಿ ಸರಿಯಾದ ನಿರ್ವಹಣೆ ಇಲ್ಲದ ಕಾರಣ ನಾಯಿಗಳು ತಮ್ಮ ವಾಸವನ್ನು ಆಸ್ಪತ್ರೆಯಲ್ಲಿ ಮಾಡ್ತಾ ಇವೆ ಎಂಬ ಆರೋಪ ಕೇಳಿ ಬಂದಿದೆ.
Advertisement
Advertisement
ಕೋವಿಡ್ ಬಂದಾಗಿನಿಂದ ಆಸ್ಪತ್ರೆಗಳಲ್ಲಿ ಬೆಡ್‍ಗಳೇ ಇಲ್ಲ ಅಂತ ಮಿಮ್ಸ್ ಸಿಬ್ಬಂದಿ ಹೇಳ್ತಿದ್ದಾರೆ. ಆದರೆ ಇಲ್ಲಿ ನೋಡಿದರೆ ಬೆಡ್‍ಗಳು ಖಾಲಿ ಬಿದ್ದಿವೆ. ಖಾಲಿ ಇರೋ ಈ ಬೆಡ್‍ಗಳ ಮೇಲೆ ನಾಯಿಗಳು ಮಲಗಿಕೊಂಡಿವೆ. ಮಂಡ್ಯ ಮಿಮ್ಸ್ ಆಸ್ಪತ್ರೆಯ ಸಿಬ್ಬಂದಿಯ ಈ ನಿರ್ಲಕ್ಷ್ಯತನಕ್ಕೆ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಒಟ್ಟಾರೆ ಕೊರೊನಾ ಅಟ್ಟಹಾಸದಿಂದ ಒಂದು ಕಡೆ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೇ ರೋಗಿಗಳು ಪರದಾಡುತ್ತಿದ್ರೆ, ಇತ್ತ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯತನದಿಂದ ಆಸ್ಪತ್ರೆ ವಾರ್ಡ್ ನಾಯಿಗಳ ಮನೆಯಾಗಿದೆ. ಈಗಲಾದರು ಅಧಿಕಾರಿಗಳಿ ಎಚ್ಚೇತ್ತುಕೊಂಡು ಸೂಕ್ತ ನಿರ್ವಹಣೆ ಮಾಡಬೇಕಿದೆ.