ಮಂಡ್ಯ: ಪ್ರಕೃತಿಯಲ್ಲಿ ಮಾನವನಿಗೆ ತಿಳಿಯದ ಅದೇಷ್ಟೋ ನಿಗೂಢಗಳು, ಅಚ್ಚರಿಗಳು ಇರುತ್ತವೆ. ಇದೀಗ ಇಂತಹದೊಂದು ಅಚ್ಚರಿ ಹಾಗೂ ನಿಗೂಢತೆಗೆ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಇರುವ ದೇವಸ್ಥಾನ ಕಾರಣವಾಗಿದೆ. ಅಲ್ಲಿನ ನಿಗೂಢತೆಗೆ ಸುತ್ತಲಿನ ಹತ್ತೂರಿನ ಜನರು ಸಹ ನಿಬ್ಬೆರಗಾಗಿದ್ದಾರೆ.
Advertisement
ಕತ್ತಲಾದರೆ ಸಹ ಆ ದೇವಸ್ಥಾನದ ಗೋಪುರದ ಬಳಿ ಹತ್ತೂರಿನ ನೂರಾರು ಜನರು ಬಂದು ನಿಶ್ಯಬ್ದವಾಗಿ ನಿಂತುಕೊಳ್ಳುತ್ತಾರೆ. ಇದೇನಿದು ದೇವಸ್ಥಾನಕ್ಕೆ ಬಂದು ಪೂಜೆ ಮಾಡುವ ಬದಲು ಈ ಜನ ಗೋಪುರದ ಬಳಿ ಅದ್ಯಾಕೆ ನಿಶ್ಯಬ್ದವಾಗಿ ನಿಲ್ಲುತ್ತಾರೆ ಅಂತ ಕೇಳಬಹುದು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಪಟ್ಟಲದಮ್ಮ ದೇವಸ್ಥಾನದ ಬಳಿಯ ದೃಶ್ಯಗಳನ್ನು ನೋಡಿ ಎಂತವರಿಗೂ ಹಾಗೆ ಅನ್ನಿಸೋದು ಸಹಜ. ಆದರೆ ಈ ದೇವಸ್ಥಾನದ ಬಳಿ ಹೋದಾಗ ಕೇಳುವ ನಿಗೂಢವಾದ ಶಬ್ದವನ್ನು ಆಲಿಸಿದ್ರೆ ಎಂಥವರು ಸಹ ಸೈಲೆಂಟ್ ಆಗಿ ಹೋಗುತ್ತಾರೆ. ಕಳೆದ 15 ದಿನಗಳಿಂದ ಈ ದೇವಸ್ಥಾನ ಗೋಪುರದ ಮೇಲಿಂದ ಉಸಿರು ಬಿಡುವ ಶಬ್ದವೊಂದು ಕೇಳಿ ಬರುತ್ತಾ ಇದೆ. ಇಷ್ಟು ವರ್ಷ ಇಲ್ಲದ ಈ ಶಬ್ದ ಈಗ ಏಕೆ ಬರ್ತಾ ಇದೆ ಎಂದು ಕೊಪ್ಪ ಗ್ರಾಮ ಸೇರಿದಂತೆ ಸುತ್ತ ಹತ್ತೂರಿನ ಜನ ಆಶ್ಚರ್ಯದಿಂದ ಬಂದ ಆ ಶಬ್ದವನ್ನು ಕೇಳಿಸಿಕೊಂಡು ನಿಬ್ಬೆರಗಾಗುತ್ತಿದ್ದಾರೆ.
Advertisement
Advertisement
ಗೋಪುರದ ಮೇಲೆ ಪಕ್ಷಿ ಅಥವಾ ಬೇರೆ ಯಾವುದಾದರೂ ಪ್ರಾಣಿ ಇರಬಹುದು ಎಂದು ಗ್ರಾಮ ಕೆಲ ಯುವಕರು ಸಹ ಗೋಪುರದ ಮೇಲೆ ಹತ್ತಿಯೂ ಸಹ ನೋಡಿದ್ದಾರೆ. ಆ ವೇಳೆ ಮೇಲೆ ಏನು ಸಿಗದೇ ಕೆಳಗೆ ಇಳಿದಾಗಲು ಅದೆ ಉಸಿರಿನ ಶಬ್ದ ಮತ್ತಷ್ಟು ಹೆಚ್ಚಾಗಿದೆ. ಈ ಶಬ್ದವನ್ನು ಕೇಳಿ ಗೋಪುರ ಮೇಲೆ ಹತ್ತಿದ ಯುವಕರು ಭಯಭೀತರಾಗಿ ಪಟ್ಟಲದಮ್ಮನನ್ನು ಕ್ಷಮೆಯಾಚನೆ ಮಾಡಿದ್ದಾರೆ. ಊರಿನವರು ಹಾಗೂ ಹಿರಿಯರು ಹೇಳುವ ಪ್ರಕಾರ ಇದು ನಮ್ಮ ಪಟ್ಟಲದಮ್ಮ ದೇವಿ ಮಾಡುತ್ತಿರುವ ಶಬ್ದ, 11 ವರ್ಷದಿಂದ ತಾಯಿಗೆ ಪರ ಹಾಗೂ ಕೊಂಡವನ್ನು ಹಾಯದ ಕಾರಣ ದೇವಿ ಈ ರೀತಿಯ ಸೂಚನೆ ನೀಡುತ್ತಾ ಇದ್ದಾಳೆ. ಇದು ದೇವರ ಪವಾಡವೆ ಎಂದು ಹೇಳುತ್ತಾ ಇದ್ದಾರೆ.
Advertisement
ದೇವಸ್ಥಾನದ ಜಾಗದ ವಿಚಾರದಲ್ಲಿ ಹಾಗೂ ನವೀಕರಣದ ವಿಚಾರದಲ್ಲಿ ವಿವಾದ ಇರುವ ಕಾರಣ ಕಳೆದ 11 ವರ್ಷಗಳಿಂದ ಇಲ್ಲಿ ಪರ ಮತ್ತು ಕೊಂಡ ಹಾಯುವುದು ನಿಂತು ಹೋಗಿದೆ. ಈ ಹಿಂದೆ ಇಲ್ಲಿ ವಿಜೃಂಭಣೆಯಿಂದ ಪರ ನಡೆಯುತ್ತಾ ಇತ್ತು. ಇದೀಗ ಪರ ಹಾಗೂ ಕೊಂಡ ಹಾಯುವುದು ನಿಂತು ಹೋಗಿರುವ ಕಾರಣ ದೇವಸ್ಥಾನ ಗೋಪುರದಲ್ಲಿ ಈ ರೀತಿಯ ಶಬ್ದ ಬರುತ್ತಿದೆ. ಈ ಶಬ್ಧ ಕೇಳಿದ್ರೆ ಎದೆ ಜಲ್ ಎನ್ನುತ್ತಾ ಇದೆ. ಈ ಶಬ್ದವನ್ನು ಹಿಂದೆ ನಾವು ಎಂದಿಗೂ ಕೇಳಿರಲಿಲ್ಲ ಎಂದು ಇಲ್ಲಿನ ಜನರು ಆತಂಕದಲ್ಲಿ ಹೇಳುತ್ತಿದ್ದಾರೆ.
ಈ ದೇವಸ್ಥಾನದ ಗೋಪುರದಿಂದ ಬರುತ್ತಿರುವ ನಿಗೂಢ ಶಬ್ದ ಏನು ಎಂದು ಇಲ್ಲಿಯವರೆಗೆ ತಿಳಿದುಬಂದಿಲ್ಲ. ಈ ನಿಗೂಢ ಶಬ್ಧವನ್ನು ಕೇಳಲು ಪ್ರತಿನಿತ್ಯ ಸಾವಿರಾರು ಜನರು ದೇವಸ್ಥಾನದ ಬಳಿ ಬರುತ್ತಿದ್ದು, ನಿಗೂಢ ಶಬ್ದವನ್ನು ಕೇಳಿ ಆತಂಕ ವ್ಯಕ್ತಪಡಿಸುತ್ತಿದ್ದು, ಪರ ಮಾಡಿದರೆ ಮಾತ್ರ ಈ ಶಬ್ದ ನಿಲ್ಲುತ್ತದೆ ಎಂದು ಜನ ಹೇಳ್ತಾ ಇದ್ದಾರೆ.