ಮಂಡ್ಯ: ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‍ಡೌನ್ ಹೆಸರಿನಲ್ಲಿ ಮಂಡ್ಯ ಡಿಸಿ ಎಸ್.ಅಶ್ವಥಿ ಕಾಮಿಡಿ ಲಾಕ್‍ಡೌನ್‍ನ್ನು ಜಾರಿ ಮಾಡಿದ್ದಾರೆ.
ಮಂಡ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಕೊರೊನಾವನ್ನು ಕಂಟ್ರೋಲ್‍ಗೆ ತರಲು ಮಂಡ್ಯ ಡಿಸಿ ವಾರದಲ್ಲಿ ನಾಲ್ಕು ದಿನ ಕಂಪ್ಲೀಟ್ ಲಾಕ್‍ಡೌನ್ ಜಾರಿಗೊಳಿಸಿದ್ದಾರೆ. ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ ಹಣ್ಣು-ತರಕಾರಿ, ದಿನಸಿ, ಮಾಂಸ ಎಲ್ಲವೂ ಬಂದ್ ಮಾಡಿರುವ ಮಂಡ್ಯ ಜಿಲ್ಲಾಧಿಕಾರಿಗಳು ಹೊಟೇಲ್, ಬಾರ್ & ರೆಸ್ಟೋರೆಂಟ್‍ಗಳಲ್ಲಿ ಪಾರ್ಸೆಲ್‍ಗಳಿಗೆ ಅವಕಾಶ ನೀಡಿದ್ದಾರೆ.
ಎಲ್ಲದಕ್ಕೂ ನಿಷೇಧ ಏರಿರುವ ಜಿಲ್ಲಾಧಿಕಾರಿಗಳು ಮದ್ಯ ಖರೀದಿಗೆ ಅವಕಾಶ ನೀಡಿದ್ದು, ಜಿಲ್ಲೆಯ ಜನರು ಇದ್ಯಾವುದು ಕಾಮಿಡಿ ಲಾಕ್‍ಡೌನ್ ಎಂದು ಹಾಸ್ಯ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಶೀಘ್ರವೇ ಇದನ್ನು ರದ್ದುಪಡಿಸಿ ತುರ್ತು ಸೇವೆ ಮಾತ್ರ ಅವಕಾಶ ನೀಡಬೇಕೆಂದು ಜನರು ಆಗ್ರಹ ಮಾಡುತ್ತಿದ್ದಾರೆ.