ಮಂಡ್ಯ: ಕೊರೊನಾದಿಂದ ಇಡೀ ದೇಶದಲ್ಲಿ ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಲಾಕ್‍ಡೌನ್ ಆಗಿತ್ತು. ಇದರಿಂದ ವ್ಯಾಪಾರ ವಹಿವಾಟು ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ಮದ್ಯ ಮಾರಾಟದಲ್ಲಿ ಇದೀಗ ಸಾಕಷ್ಟು ಇಳಿಮುಖ ಕಂಡಿದೆ. ಸಕ್ಕರೆ ನಾಡು ಮಂಡ್ಯದಲ್ಲೂ ಮದ್ಯ ಮಾರಾಟ ತೀವ್ರವಾದ ಕುಸಿತ ಕಂಡಿದೆ.
ಮಂಡ್ಯ ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟ ಕಡಿಮೆಯಾಗಿದೆ. ಕಳೆದ ಎರಡು ತಿಂಗಳಿನಿಂದ ಸುಮಾರು ಶೇ. 30 ರಿಂದ 40 ರಷ್ಟು ವ್ಯಾಪಾರ ಕುಸಿತ ಕಂಡಿದೆ. ಒಂದು ಕಡೆ ಮಂಡ್ಯ ಜಿಲ್ಲೆಯಲ್ಲಿ ಶೇ.30 ರಿಂದ 40 ರಷ್ಟು ಮದ್ಯ ಮಾರಾಟ ಕಡಿಮೆಯಾಗಿರುವುದರಿಂದ ಬಾರ್ ಮಾಲೀಕರಿಗೆ ನಷ್ಟವಾಗುತ್ತಿದೆ. ಆದರೆ ಇನ್ನೊಂದು ಕಡೆ ಜಿಲ್ಲೆಯಲ್ಲಿ ಕುಡುಕರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಕೆಲ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸುತ್ತಿವೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
Advertisement
Advertisement
ಬಾರ್ ಮಾಲೀಕರು ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ಯಾರು ಕೂಡ ಜಿಲ್ಲೆಯಲ್ಲಿ ಇಲ್ಲ. ಅಲ್ಲದೇ ಮದ್ಯದ ಬೆಲೆ ಹೆಚ್ಚಿದ ಕಾರಣ ಹೆಚ್ಚು ಕುಡಿಯುವವರು ಕಡಿಮೆ ಕುಡಿಯುತ್ತಿದ್ದಾರೆ. ಇದರಿಂದ ಮದ್ಯ ಮಾರಾಟ ಕಡಿಮೆ ಆಗಿದೆ ಎಂದು ಹೇಳಿದ್ದಾರೆ.
Advertisement
ಲಾಕ್‍ಡೌನ್ ಇದ್ದ ವೇಳೆ ಮದ್ಯ ಪ್ರಿಯರು ನಮಗೆ ಬಾರ್‌ಗಳನ್ನು ಮಾತ್ರ ತೆರೆಯಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರು. ಸತತ ಎರಡು ತಿಂಗಳ ಬಳಿಕ ಅಂದರೆ ಮೇ 4 ರಂದು ರಾಜ್ಯದ ಎಲ್ಲಾ ಬಾರ್‌ಗಳು ಓಪನ್ ಆಗಿದ್ದವು. ಈ ವೇಳೆ ಮದ್ಯ ಪ್ರಿಯರು ಕ್ಯೂ ನಿಂತುಕೊಂಡು ತಮಗೆ ಬೇಕಾದಷ್ಟು ಮದ್ಯವನ್ನು ಖರೀದಿ ಮಾಡಿದ್ದರು. ಈ ವೇಳೆ ಒಂದು ವಾರದ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿತ್ತು. ಆದರೆ ಇದೀಗ ಮದ್ಯ ಮಾರಾಟ ಕುಸಿತ ಕಂಡಿದೆ.