ಮಂಡ್ಯ: ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ಇಲ್ಲ. ಆದರೆ ಗಾಂಜಾ ಮಾರಾಟ ನಡೆದಿರುವುದು ನಿಜ ಎಂದು ಮಂಡ್ಯ ಎಸ್‍ಪಿ ಪರಶುರಾಮ್ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಪೊಲೀಸರ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯೋದಿಲ್ಲ: ಡಿಸಿ ತಮ್ಮಣ್ಣ ಗಂಭೀರ ಆರೋಪ
ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‍ಪಿ, ಇದುವರೆಗೆ ಮಂಡ್ಯ ಜಿಲ್ಲೆಯಲ್ಲಿ ಡ್ರಗ್ಸ್ ಮಾರಾಟ ಕಂಡುಬಂದಿಲ್ಲ. ಆದರೆ ಗಾಂಜಾ ಮಾರಾಟ ಪ್ರಕರಣಗಳು ಸಿಕ್ಕಿವೆ ಎಂದು ತಿಳಿಸಿದ್ದಾರೆ. ಮಂಡ್ಯದಲ್ಲಿ ಡ್ರಗ್ಸ್ ಸಿಗುತ್ತೇ ಎಂದು ಮಾಜಿ ಎಂಪಿ ಶಿವರಾಮೇಗೌಡ ಹಾಗೂ ಶಾಸಕ ಡಿ.ಸಿ.ತಮ್ಮಣ್ಣ ಆರೋಪಿಸಿದ್ದರು.
ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 43 ಗಾಂಜಾ ಪ್ರಕರಣಗಳು ಪತ್ತೆಯಾಗಿವೆ. 5 ವರ್ಷದಲ್ಲಿ 145 ಕೆಜಿ ಗಾಂಜಾವನ್ನು ಸೀಜ್ ಮಾಡಿದ್ದೇವೆ. ಇದುವರೆಗೆ 64 ಮಂದಿ ಆರೋಪಿಗಳನ್ನು ಬಂಧನ ಮಾಡಿದ್ದೇವೆ. ಇದರಲ್ಲಿ ಪೆಡ್ಲರ್, ಗ್ರಾಹಕರು ಮತ್ತು ಮಾರಾಟ ಮಾಡುವವರು ಇದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಹೆಚ್ಚು ಗಾಂಜಾ ಮಾರಾಟವಾಗುತ್ತಿತ್ತು. ಕಳೆದ ವರ್ಷ 7 ಪ್ರಕರಣಗಳ ದಾಖಲಾಗಿವೆ. ಒಂಭತ್ತು ಆರೋಪಿಗಳನ್ನು ಬಂಧಿಸಿದ್ದೇವೆ ಎಂದರು.
ನಾಗಮಂಗಲಕ್ಕೆ ಆಂಧ್ರ ಪ್ರದೇಶದ ಲಿಂಕ್ ಇದೆ. ನಾಗಮಂಗಲಕ್ಕೆ ಆಂಧ್ರ ಪ್ರದೇಶದಿಂದ ಗಾಂಜಾ ಬರುತ್ತಿತ್ತು. ಆ ಲಿಂಕ್‍ನನ್ನು ಈಗ ಬ್ರೇಕ್ ಮಾಡಿದ್ದೇವೆ. ಮಂಡ್ಯ ಜಿಲ್ಲೆಗೆ ಮೈಸೂರು, ಬಳ್ಳಾರಿ ಹಾಗೂ ಆಂಧ್ರದ ಲಿಂಕ್ ಹೆಚ್ಚಿದೆ. ಇಲ್ಲಿಂದ ಹೆಚ್ಚು ಗಾಂಜಾ ಸಪ್ಲೈ ಆಗುತ್ತಿದೆ. ಗಾಂಜಾ ಮಾರಾಟ ಹಾಗೂ ಸೇವನೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಎಸ್‍ಪಿ ಪರಶುರಾಮ್ ಹೇಳಿದರು.