ಲಕ್ನೋ: ವರ ಮತ್ತು ಆತನ ಸ್ನೇಹಿತ ಮದುವೆ ಮಂಟಪಕ್ಕೆ ಕುಡಿದು ಬಂದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ವಧು ಮದುವೆಯನ್ನು ನಿಲ್ಲಿಸಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜನ್‍ನಲ್ಲಿ ನಡೆದಿದೆ.
ಪ್ರಯಾಗರಾಜ್‍ನ ಪ್ರತಾಪಗಢ ನಗರದ ಟಿಕ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ರೈತರೊಬ್ಬರು ತಮ್ಮ ಮಗಳ ಮದುವೆಯನ್ನು ರವೀಂದ್ರ ಪಟೇಲ್ ಎಂಬವರ ಜೊತೆ ನಿಗದಿ ಪಡಿಸಿದ್ದರು. ಆದರೆ ಮದುವೆ ದಿನ ವರ ಮತ್ತು ಆತನ ಸ್ನೇಹಿತರು ಕುಡಿದು ಮಂಟಪಕ್ಕೆ ಬಂದರು. ಈ ವೇಳೆ ವಧು ಹಾಗೂ ಆಕೆಯ ಕುಟುಂಬಸ್ಥರು ಮೊದಲಿಗೆ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ವರ ವಧುವನ್ನು ಜೈಮಾಲಾ ಹಾಡಿಗೆ ನೃತ್ಯ ಮಾಡುವಂತೆ ಒತ್ತಾಯಿಸಿದಾಗ ಪರಿಸ್ಥಿತಿ ತಿರುವು ಪಡೆದುಕೊಂಡಿದೆ.
Advertisement
Advertisement
ನಂತರ ಮಹಿಳೆ ನೃತ್ಯ ಮಾಡಲು ನಿರಾಕರಿಸಿ ವರನ ನಡವಳಿಕೆಯಿಂದ ಆಕ್ರೋಶಗೊಂಡು ಮದುವೆಯನ್ನು ನಿಲ್ಲಿಸಿದ್ದಾಳೆ. ವಧು ಮದುವೆಯನ್ನು ನಿರಾಕರಿಸಿದ ನಂತರ ಆಕೆಯ ಕುಟುಂಬಸ್ಥರು ಮದುವೆ ವೇಳೆ ವರನಿಗೆ ನೀಡಿದ್ದ ಉಡುಗೊರೆಯನ್ನು ಹಿಂದಿರುಗಿಸುವಂತೆ ವರನ ಕುಟುಂಬಸ್ಥರನ್ನು ಕೇಳಿದ್ದಾರೆ. ಇದನ್ನು ಓದಿ: ಪಾಕಿಸ್ತಾನ ಸ್ಟಾರ್ ಕ್ರಿಕೆಟಿಗನ ಪತ್ನಿಗೆ ಕೊಹ್ಲಿ ಎಂದರೆ ಪಂಚಪ್ರಾಣವಂತೆ
Advertisement
ಹೀಗಾಗಿ ವರನ ಕುಟುಂಬಸ್ಥರು ಪೊಲೀಸರ ಮಧ್ಯಸ್ಥಿತಿಕೆಯಲ್ಲಿ ಸಂಧಾನ ಮಾಡಿಕೊಳ್ಳವುದಾಗಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿದ ನಂತರ ಮಹಿಳೆ ವರನನ್ನು ಮದುವೆಯಾಗಲು ನಿರಾಕರಿಸಿರುವುದಾಗಿ ತಿಳಿಸಿದ್ದಾಳೆ. ಅಲ್ಲದೆ ಮದುವೆ ವೇಳೆ ವರನಿಗೆ ನೀಡಿದ್ದ ನಗದು ಹಾಗೂ ಇತರ ವಸ್ತುಗಳನ್ನು ಹಿಂದಿರುಗಿಸುವಂತೆ ವಧುವಿನ ಕಡೆಯವರು ತಿಳಿಸಿದ್ದಾರೆ.