ಮಂಜು ಬಗ್ಗೆ ಹೇಳುತ್ತಾ ಭಾವುಕರಾದ ಚಕ್ರವರ್ತಿ ಚಂದ್ರಚೂಡ್

Public TV
2 Min Read
manju 1 1

– ಮಂಜು ಕುರಿತು ಹಾಡು ಬರೆದಿದ್ದ ಚಕ್ರವರ್ತಿ
– 16 ಲಕ್ಷ ಮಂದಿಯಿಂದ ಪದ್ಯ ಶೇರ್

ಬಿಗ್‍ಬಾಸ್ ಗ್ರ್ಯಾಂಡ್ ಫಿನಾಲೆಯ ಕೊನೆಯ ಟಾಪ್ 2 ಕಂಟೆಸ್ಟೆಂಟ್‍ನನ್ನು ವೇದಿಕೆ ಮೇಲೆ ಸುದಿಪ್ ಕರೆದುಕೊಂಡು ಬರುತ್ತಾರೆ. ನಂತರ ಇಬ್ಬರಲ್ಲಿ ಯಾರು ಗೆಲ್ಲಬಹುದು ಎಂದು ಇತರ ಸ್ಪರ್ಧಿಗಳಿಗೆ ಪ್ರಶ್ನಿಸಿದಾಗ ಬಹುತೇಕ ಮಂದಿ ಮಂಜು ಹೆಸರನ್ನು ಸೂಚಿಸಿದ್ದರು. ಆದರೆ ಈ ವೇಳೆ ಚಕ್ರವರ್ತಿ ಚಂದ್ರಚೂಡ್‍ರವರು ಬಹಳ ಭಾವುಕರಾಗಿ ಉತ್ತರಿಸಿದ್ದಾರೆ.

manju 2 1

7 ದೇಶಗಳಲ್ಲಿ 8 ಕೋಟಿ 76 ಲಕ್ಷ ಜನ ಕಳೆದ 15 ದಿನಗಳಲ್ಲಿ ಕನ್ನಡ ಬಿಗ್‍ಬಾಸ್ ಕುರಿತಂತೆ ಚರ್ಚೆ ನಡೆಸುತ್ತಿದ್ದಾರೆ. ಎರಡು ವಲಯದಲ್ಲಿ ಎರಡು ದಿಕ್ಕಿನಲ್ಲಿ ಚರ್ಚೆ ನಡೆಯುತ್ತಿದೆ. ಇಬ್ಬರು ನನಗೆ ಒಂದು ರೀತಿ ತಮ್ಮಂದಿರು, ಅದರಲ್ಲಿ ಒಬ್ಬ ಅಂತರಾಷ್ಟ್ರೀಯ ಪ್ರತಿಭೆ, ಮತ್ತೊಬ್ಬ ಕುಡಿಯಲು ನೀರು ಕೂಡ ಇರದ ಊರಿನಿಂದ ಬಂದವನು. ಒಬ್ಬ ಯಶಸ್ಸು ಹಾಗೂ ಸೋಲು ಎರಡನ್ನು ಕಂಡು ಸೋತು ಗೆದ್ದವನು. ಆದರೆ ಒಬ್ಬ ಒಂದೇ ಒಂದು ಯಶಸ್ಸು ಸಿಕ್ಕಿದರೆ ನನ್ನ ಜೀವನ ಉದ್ದಾರ ಮಾಡಿಕೊಳ್ಳುತ್ತೇನೆ. ನೂರಾರು ಜನರಿಗೆ ನಾನು ಮಾದರಿಯಾಗುತ್ತೇನೆ ಎಂದು ನಿಂತಿದ್ದಾನೆ. ಒಬ್ಬನಿಗೆ ಛಲ ಇದ್ದರೆ, ಮತ್ತೊಬ್ಬನಿಗೆ ಅಮಾಯಕತ್ವವಿದೆ. ಒಬ್ಬರಿಗೆ ಗೆಲುವು ಅಗತ್ಯ, ಮತ್ತೊಬ್ಬರಿಗೆ ಗೆಲುವು ಅನಿವಾರ್ಯ. ಇಷ್ಟನ್ನೆಲ್ಲಾ ನೋಡಿದಾಗ ನನ್ನ 66 ದಿನಗಳ ಜರ್ನಿ ನೋಡಿದಾಗ, ಕರ್ನಾಟಕದ ಜನತೆಯ ಆಶೀರ್ವಾದ ನೋಡಿದಾಗ ನನ್ನ ಮತ ಅಂತಃಕರ್ಣಕ್ಕೆ, ಹಳ್ಳಿ ಹಕ್ಕಿ ಪ್ರತಿಭೆಗೆ, ಇಂದು ನಾನು ಮಂಜು ಬಗ್ಗೆ ಬರೆದ ಒಂದು ಪದ್ಯವನ್ನು 16 ಲಕ್ಷ ಜನ ಶೇರ್ ಮಾಡಿದ್ದಾರೆ. ಅಷ್ಟು ಜನ ಮಂಜುರನ್ನು ಬಹಳ ಇಷ್ಟಪಡುತ್ತಿದ್ದಾರೆ ಎಂದು ಚಕ್ರವರ್ತಿ ಹೇಳಿದ್ದಾರೆ.

manju 3 1

ಮನೆಯಲ್ಲಿ ಕರೆಂಟ್ ಇಲ್ಲ, ಬಸ್ ಇಲ್ಲ, ಏನೂ ಇಲ್ಲದ ಒಬ್ಬ ಬಡ ಹುಡುಗ ಇಂತಹ ಒಂದು ದೊಡ್ಡ ಆಟಕ್ಕೆ ಬಂದು ಎಲ್ಲರೊಂದಿಗೆ ಸ್ಪರ್ಧಿಸುತ್ತಾನಲ್ಲ, ಅವನದ್ದು ನಿಜವಾದ ಶಕ್ತಿ, ಅದು ನಿಜವಾದ ತಾಕತ್ತು. ಅಂತಹ ಕೆಲಸ ಮಂಜು ಮಾಡಿದ್ದಾನೆ. ಅರವಿಂದ್ ಕೆಪಿಗೆ ಎಲ್ಲವನ್ನು ಭರಿಸಿಕೊಳ್ಳುವ ಶಕ್ತಿ ಎಲ್ಲ ಮಾರ್ಗಗಳಿದೆ. ಆದರೆ ಮಂಜು ಏನೂ ಇಲ್ಲದೇ ಬಂದಿದ್ದಾನೆ, ನಾನು ಅವನನ್ನು ಎಷ್ಟೋ ಬಾರಿ ಕೆಣಕಿದೆ. ಆದರೆ ಅವನು ಒಂದು ಕ್ಷಣ ಕೂಡ ಕುಗ್ಗಿದ್ದನ್ನು ನಾನು ನೋಡಲೇ ಇಲ್ಲ. ನಾನೇ ಎಷ್ಟೋ ಅಡ್ಡಗಳನ್ನು ಹಾಕಿದೆ. ಆದರೆ ಆ ಅಡ್ಡಗಳನ್ನೆಲ್ಲಾ ದಾಟಿ ನನ್ನ ಮನಸ್ಸನ್ನು ಹಾಗೂ ನನ್ನ ತಾಯಿ ಮನಸ್ಸನ್ನು ಗೆದ್ದಿದ್ದು, ನೂರಾರು ಕೋಟಿ ಜನರ ಆಶೀರ್ವಾದಕ್ಕೆ ಕಾರಣನಾಗಿದ್ದು ಮಂಜು. ಈ ಎಲ್ಲಾ ಕಾರಣಕ್ಕೆ ಬಿಗ್‍ಬಾಸ್ ಗ್ರ್ಯಾಂಡ್ ಫಿನಾಲೆಯ ಸೀಸನ್-8ರ ಗೆಲುವು ಮಂಜು ಪಾವಗಡ ಆಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸುವ ಜೊತೆಗೆ ಮಂಜುರನ್ನು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ಬಿಗ್‍ಬಾಸ್ ಮನೆಯಲ್ಲಿ ಮಂಜು ಕಲಿತಿದ್ದೇನು..?- ಮುಂದಿನ ಯೋಚನೆ, ಯೋಜನೆಗಳ ಬಗ್ಗೆ ವಿನ್ನರ್ ಮಾತು

Share This Article
Leave a Comment

Leave a Reply

Your email address will not be published. Required fields are marked *