ಮಂಜು ಉಲ್ಟಾ ನನ್ಮಗ ಅಂತ ಗೊತ್ತು: ದಿವ್ಯಾ ಉರುಡುಗ

Public TV
1 Min Read
Divya Manju

ಬಿಗ್‍ಬಾಸ್ ಆರಂಭಗೊಂಡು ಇಷ್ಟು ದಿನಗಳ ಬಳಿಕ ಸ್ಪರ್ಧಿಗಳು ಒಬ್ಬರಿಗೊಬ್ಬರು ಕ್ಲೋಸ್ ಆಗ್ತಿದ್ದಾರೆ. ತಮ್ಮ ಆಲೋಚನೆಗಳಿಗೆ ಅಡ್ಜಸ್ಟ್ ಆಗೋ ಸ್ಪರ್ಧಿಗಳ ಜೊತೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಿದ್ದಾರೆ. ಟಾಸ್ಕ್ ಹೊರತಾಗಿ ಇನ್ನುಳಿದ ಸಮಯವನ್ನ ಅತ್ಯಂತ ಮಜಾವಾಗಿ ಎಲ್ಲರೂ ಕಳೆಯುತ್ತಿದ್ದಾರೆ. ವಾಹಿನಿ ಸದ್ಯ ಅನ್‍ಸೀನ್ ದೃಶ್ಯವನ್ನ ಹಂಚಿಕೊಂಡಿದ್ದು, ಇದರಲ್ಲಿ ಮಂಜು ಉಲ್ಟಾ ನನ್ ಮಗ ಅಂತ ನನಗೆ ಗೊತ್ತಿದೆ ಎಂದು ದಿವ್ಯಾ ಉರುಡಗ ಹೇಳಿದರು.

Divya Manju Arvind 1

ಸ್ವಿಮ್ಮಿಂಗ್ ಪೂಲ್ ಬಳಿ ದಿವ್ಯಾ ಉರುಡುಗ, ಅರವಿಂದ್, ಮಂಜು ಮತ್ತು ದಿವ್ಯಾ ಸುರೇಶ್ ಕುಳಿತು ಹರಟೆ ಹೊಡಿತ್ತಿದ್ದರು. ಆಗ ಮಂಜು ಕುದುರೆಮುಖದಲ್ಲಿ ಏನಿದೆ ಅಂತ ದಿವ್ಯಾಗೆ ಕೇಳಿದರು. ಸ್ವಲ್ಪ ಯೋಚಿಸಿ ಉತ್ತರಿಸಿದ ದಿವ್ಯಾ, ಕುದುರೆಮುಖದಲ್ಲಿ ಕಣ್ಣು, ಬಾಯಿ, ಮೂಗು ಇದೆ ಅಂತ ಹೇಳಿದರು. ನಿಮ್ಮ ಉತ್ತರ ತಪ್ಪು. ಕುದುರೆಮುಖದಲ್ಲಿ ಕೆಮ್ಮಣ್ಣುಗುಂಡಿ ಇದೆ ಅಂತ ಮಂಜು ಪಂಚ್ ಕೊಟ್ಟರು.

Divya Manju Arvind 2

ಒಂದು ಕ್ಷಣ ಶಾಕ್ ಆದಂತೆ ಕಂಡ ದಿವ್ಯಾ, ಹೌದಾ, ಕುದುರೆಮುಖದಲ್ಲಿ ಕೆಮ್ಮಣ್ಣುಗುಂಡಿ ಇದೆಯಾ ಅಂತ ಅಂದ್ರು. ಈ ವೇಳೆ ಮಧ್ಯ ಪ್ರವೇಶಿಸಿದ ದಿವ್ಯಾ ಸುರೇಶ್, ನೀನು ಕೆಮ್ಮಣ್ಣುಗುಂಡಿ ಅಂತ ಹೇಳಿದ್ರೆ, ಇವನು ಕಣ್ಣು, ಬಾಯಿ, ಮುಖ ಇದೆ ಅಂತ ಹೇಳ್ತಿದ್ದ. ನೀನು ಹಾಗೆ ಹೇಳಿದ್ದಕ್ಕೆ, ಈ ರೀತಿ ಹೇಳಿದ್ದಾನೆ ಅಂತ ಮಂಜುಗೆ ಟಕ್ಕರ್ ಕೊಟ್ಟರು.

ನೀನು ಉಲ್ಟಾ ನನ್ ಮಗ ಅಂತ ನನಗೆ ಗೊತ್ತು. ಅದಕ್ಕೆ ನಾನು ಹಾಗೆ ಹೇಳಿದೆ ಎಂದು ಮಂಜು ಮೇಲೆ ದಿವ್ಯಾ ಹುಸಿ ಕೋಪ ಮಾಡಿಕೊಂಡರು. ನಂತ್ರ ನಾನು ಒಂದು ಪ್ರಶ್ನೆ ಕೇಳ್ತೀನಿ. ಈಗ ಯೋಚನೆ ಮಾಡಿ ಹೇಳ್ತೀನಿ ಅಂತ ಸಮಯಾವಕಾಶ ಕೇಳಿದರು. ಇನ್ನು ಅಲ್ಲೇ ಪಕ್ಕದಲ್ಲೇ ಕುಳಿತಿದ್ದ ಅರವಿಂದ್, ಫಸ್ಟ್ ಹೆಸರು ಹೇಳಬೇಕು. ಆಮೇಲೆ ಟಾಸ್ಕ್ ರೆಡಿಯಾಗುತ್ತೆ ಅಂತ ನಗೆ ಚಟಾಕಿ ಹಾರಿಸಿದರು.

Share This Article