ಒಟ್ಟಾವಾ: ಮಂಜುಗಡ್ಡೆಯಲ್ಲಿ ಗಾಂಧೀಜಿ ಪ್ರತಿಮೆಯನ್ನು ಮಾಡಿ ಕೆನಡಾದ ಹೋಟೆಲ್‍ವೊಂದು ವಿಭಿನ್ನವಾಗಿ ಗೌರವವನ್ನು ಸಲ್ಲಿಸಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕೆನಡಾದ ಹೋಟೆಲ್ ಡಿ ಗ್ಲೇಸ್‍ನಲ್ಲಿ ಐಸ್ ನಿಂದ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಮಾಡಿದೆ. ಕ್ವೆಬೆಕ್ ಸಿಟಿಯಲ್ಲಿರುವ ಹೋಟೆಲ್ ಮುಂಭಾಗದಲ್ಲಿ ಗಾಂಧೀಜಿ ಪ್ರತಿಮೆ ಇಡಲಾಗಿದೆ. ಬರೋಬ್ಬರಿ 7 ಅಡಿ ಎತ್ತರವಿದೆ. ಪ್ರತಿಮೆಯ ಕೆಳಭಾಗದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಕುರಿತಾಗಿ ಬರೆಯಲಾಗಿದೆ.
Advertisement
Launching #AzadiKaAmritMahotsav, to mark 75 years of India’s Independence, with an ice sculpture of Mahatma Gandhi in the iconic Ice Hotel @Hoteldeglace in #Quebec.
@HCI_Ottawa @CanadainIndia @Quebec_India @MEAIndia @IndianDiplomacy @ICCR_Delhi @MinOfCultureGoI @Valcartier pic.twitter.com/TT6Vn6acxe
— IndiainToronto (@IndiainToronto) March 20, 2021
Advertisement
ಈ ಒಂದು ಸುಂದರವಾದ ಪ್ರತಿಮೆಯನ್ನು ಮಾರ್ಕ್ ಲೆಪೈರೆ ತಯಾರಿಸಿದ್ದಾರೆ. ಮಂಜುಗೆಡ್ಡೆ 9 ತುಂಡುಗಳನ್ನು ತೆಗೆದುಕೊಂಡು ಕೇವಲ 5 ಗಂಟೆಯಲ್ಲಿ ಪ್ರತಿಮೆಯನ್ನು ಮಾಡಲಾಗಿದೆ. ಗಾಂಧಿ ಪ್ರತಿಮೆಯ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿವೆ.
Advertisement
Advertisement
ಮಂಜುಗಡ್ಡೆಯಲ್ಲಿ ಮಾಡಲಾಗಿರುವ ಗಾಂಧಿ ಪ್ರತಿಮೆಯ ಫೋಟೋಗಳನ್ನು ಟೊರೆಂಟೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.