ಮಂಗಳೂರು: ಮಹಾಮಾರಿ ಕೊರೊನಾ ವೈರಸ್ ಗೆ ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ಇಂದು ಮತ್ತೊಂದು ಬಲಿಯಾಗಿದೆ.
ಮಂಗಳೂರಿನ ಉಳ್ಳಾಲ ಮೂಲದ 60 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಲಿವರ್, ಡಯಾಬಿಟಿಸ್ ಮತ್ತು ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಕೋವಿಡ್ ಆಸ್ಪತ್ರೆಗೆ ಬಂದಿದ್ದರು. ಆದರೆ ಇದೀಗ ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Advertisement
Advertisement
ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಭಾನುವಾರ ಒಂದೇ ದಿನ ಮೂವರು ಕೊರೊನಾಗೆ ಬಲಿಯಾಗಿದ್ದರು. ಇತ್ತ ಬಾಗಲಕೋಟೆಯಲ್ಲಿ 59 ವರ್ಷದ ಸಮುದಾಯ ಆರೋಗ್ಯ ಕೇಂದ್ರದ (ಸರ್ಕಾರಿ ಆಸ್ಪತ್ರೆ) ಡಿ ದರ್ಜೆ ನೌಕರ ಕೊರೊನಾಗೆ ಇಂದು ಬಲಿಯಾಗಿದ್ದಾರೆ. ಜಿಲ್ಲೆಯ ಗುಳೇದಗುಡ್ಡ ಸಮುದಾಯ ಆರೋಗ್ಯ ಕೇಂದ್ರದ ಡಿ ದರ್ಜೆ ನೌಕರ ಕಳೆದ ನಾಲ್ಕು ದಿನದ ಹಿಂದೆ ತೀವ್ರ ಉಸಿರಾಟದ ತೊಂದರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.
Advertisement
Advertisement
ಜೂನ್ 27 ರಂದು ಕೊರೊನಾ ದೃಢಪಟ್ಟಿತ್ತು. ಒಂದು ದಿನದಿಂದ ವೆಂಟಿಲೇಟರ್‍ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಪಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಹೀಗಾಗಿ ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗುತ್ತಿದೆ ಎಂದು ಬಾಗಲಕೋಟೆ ಡಿಹೆಚ್‍ಒ ಅನಂತ ದೇಸಾಯಿ ಮಾಹಿತಿ ನೀಡಿದ್ದಾರೆ.
ಭಾನುವಾರ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದ ಹೆಲ್ತ್ ಬುಲೆಟಿನ್‍ನಲ್ಲಿ 1,267 ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 13,190ಕ್ಕೇರಿಕೆಯಾಗಿದೆ. ಮಹಾಮಾರಿ ಕೊರೊನಾಗೆ ರಾಜ್ಯದಲ್ಲಿ 16 ಮಂದಿ ಬಲಿಯಾಗಿದ್ದರು. ಬೆಂಗಳೂರಿನಲ್ಲಿ ನಾಲ್ವರು (ರೋಗಿ-8691, ರೋಗಿ-9014, ರೋಗಿ 9321 ರೋಗಿ-11,993) ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಧಾರವಾಡದ 71 ವರ್ಷದ ವೃದ್ಧೆ (ರೋಗಿ-6257), ಹಾಸನದ 60 ವರ್ಷದ ವೃದ್ಧೆ (ರೋಗಿ-7743), ಬಾಗಲಕೋಟೆಯ 50 ವರ್ಷದ ಪುರುಷ (ರೋಗಿ-12078), 55 ವರ್ಷದ ಪುರುಷ (ರೋಗಿ-10,642) ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡದ 51 ವರ್ಷದ ಮಹಿಳೆ (ರೋಗಿ 12398) 42 ವರ್ಷದ ಮಹಿಳೆ (ರೋಗಿ-11,386), ಮೈಸೂರಿನ 70 ವರ್ಷದ ವೃದ್ಧ (ರೋಗಿ 11,942), ತುಮಕೂರಿನ 76 ವರ್ಷದ ವೃದ್ಧೆ (ರೊಗಿ-11948), 40 ವರ್ಷದ ಪುರುಷ (ರೋಗಿ-11949), ಬಳ್ಳಾರಿಯ 57 ವರ್ಷದ ಪುರುಷ (ರೋಗಿ-12272), ಕಲಬುರಗಿಯ 65 ವರ್ಷದ ಪುರುಷ (ರೋಗಿ-12306) ಕೊರೊನಾಗೆ ಬಲಿಯಾಗಿದ್ದಾರೆ.