ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೈಕಂಪಾಡಿಯ ಮಲಬಾರ್, ಲಕ್ಷ್ಮಿ ಹಾಗೂ ಕಾರ್ನಾಡ್ ಆಕ್ಸಿಜನ್ ರಿಫಿಲ್ಲಿಂಗ್ ಘಟಕಗಳಿಲ್ಲಿ ಆಕ್ಸಿಜನ್ ಉತ್ಪಾದನೆ ಹಾಗೂ ಸಿಲೆಂಡರ್ ಗಳಿಗೆ ರಿಫಿಲ್ಲಿಂಗ್ ಮಾಡುವ ಪ್ರಕ್ರಿಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Advertisement
ಆಕ್ಸಿಜನ್ ಫಿಲ್ಲಿಂಗ್ ಘಟಕಗಳಿಗೆ ಯಾವ ಯಾವ ಜಿಲ್ಲೆಯ ಆಕ್ಸಿಜನ್ ಉತ್ಪಾದನಾ ಘಟಕಗಳಿಂದ ಎಷ್ಟು ಪ್ರಮಾಣದ ಆಕ್ಸಿಜನ್ ವಾರದಲ್ಲಿ ಬರುತ್ತದೆ. ಸ್ಥಳೀಯವಾಗಿ ಆಕ್ಸಿಜನ್ ಉತ್ಪಾದಿಸುವ ಬಗ್ಗೆ ಅವುಗಳನ್ನು ರಿಫಿಲ್ಲಿಂಗ್ ಮಾಡಿ ಯಾವ ಯಾವ ತಾಲೂಕಿನ ಆಸ್ಪತ್ರೆಗಳಿಗೆ ಕಳಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.
Advertisement
Advertisement
ಜಿಲ್ಲೆಯಲ್ಲಿನ 3 ಆಕ್ಸಿಜನ್ ಉತ್ಪಾದನಾ ಹಾಗೂ ರಿಫಿಲ್ಲಿಂಗ್ ಘಟಕಗಳಲ್ಲಿನ ಆಕ್ಸಿಜನ್ ಅನ್ನು ಆಸ್ಪತ್ರೆಗಳಲ್ಲಿನ ರೋಗಿಗಳ ಚಿಕಿತ್ಸೆಗೆ ಬೇಡಿಕೆಗನುಗುಣವಾಗಿ ಪೂರೈಕೆ ಆಗಬೇಕೆಂದು ಸೂಚಿಸಿದರು. ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಯಾವುದೇ ಆಸ್ಪತ್ರೆಯಲ್ಲಿ ಆಗದಂತೆ ಅವುಗಳ ಸಾಗಾಣಿಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಅಗತ್ಯಕ್ಕನುಸಾರವಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು.
Advertisement
ಕೈಗಾರಿಕೆಗೆ ಬಳಸಲು ನೀಡುವ ಪ್ರಮಾಣ ಕಡಿತಗೊಳಿಸಿ ವೈದ್ಯಕೀಯ ಕ್ಷೇತ್ರಕ್ಕೆ ಆದ್ಯತೆಯ ಮೇಲೆ ಆಕ್ಸಿಜನ್ ಒದಗಿಸಬೇಕು ಎಂದು ಸೂಚಿಸಿದರು ಅಲ್ಲದೆ ಸ್ಥಳೀಯವಾಗಿ ಉತ್ಪಾದಿಸುತ್ತಿರುವ ಪ್ರಮಾಣವನ್ನು ಹೆಚ್ಚಿಸಲು ಮುಂದಾಗಬೇಕೆಂದು ಆಕ್ಸಿಜನ್ ತಯಾರಕ ಘಟಕಗಳಿಗೆ ಸೂಚಿಸಿದರು. ಕೊರೊನಾ ತೀವ್ರಗೊಂಡ ರೋಗಿಗಳಿಗೆ ಮಾತ್ರ ಆಕ್ಸಿಜನ್ ಪೂರೈಸಲಾಗುತ್ತದೆ ಯಾರಿಗೆ ನೀಡಬೇಕು, ಯಾರಿಗೆ ಅವಶ್ಯಕತೆ ಇದೆ ಎನ್ನುವುದು ಜಿಲ್ಲಾಡಳಿತ ತೀರ್ಮಾನಿಸುತ್ತದೆ. ತೀವ್ರ ಸಂಕಷ್ಟದಲ್ಲಿರುವ ರೋಗಿಗಳಿಗೆ ಆಕ್ಸಿಜನ್ ಹಾಗೂ ವೆಂಟಿಲೇಟರ್ ಹಾಸಿಗೆ ನೀಡಲಾಗುವುದು ಎಂದರು.
ಡ್ಯೂರೂ ಸಿಲೆಂಡರ್ ಗಳಲ್ಲಿ ಹೆಚ್ಚಿನ ಆಕ್ಸಿಜನ್ ಶೇಖರಣೆ ಮಾಡಬಹುದಾಗಿದ್ದು, ಅವುಗಳನ್ನು ತಾಲೂಕು ಆಸ್ಪತ್ರೆಗಳ ವೆಂಟಿಲೇಟರ್ ಗಳ ಬಳಕೆಗೆ ನೀಡಬಹುದಾಗಿದೆ. ಅವುಗಳು ಎರಡು ದಿನ ಬಳಗಕೆಗೆ ಬರುತ್ತವೆ. ಅವುಗಳನ್ನು ವಿದೇಶದಿಂದ ತರಿಸಲು ಯೋಜನೆ ರೂಪಿಸಿದೆ. ಆಕ್ಸಿಜನ್ ಘಟಕಗಳ ಮೇಲುಸ್ತುವಾರಿಗೆ ಅಧಿಕಾರಿಗಳನ್ನು ದಿನದ 24 ಗಂಟೆಗೆ ಪಾಳಿಯ ಮೇಲೆ ನೇಮಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಸಚಿವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಭರತ್ ಶೆಟ್ಟಿ ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಕುಮಾರ್ ಸಹಾಯಕ ಔಷಧಿ ನಿಯಂತ್ರಕರಗಳಾದ ರಮಾಕಾಂತ್ ಕುಂಟೆ ಶಂಕರ್ ನಾಯ್ಕ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.