ಮಂಗಳೂರು: ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್‍ಡೌನ್ ಇದ್ದರೂ ನಗರದ ಜನ ಮಾತ್ರ ಲಾಕ್ ಡೌನ್ ಮುಗಿದೇ ಹೋಯ್ತು ಅಂದುಕೊಂಡಂತಿದೆ. ಇಂದು ಬೆಳಗ್ಗೆ 10 ಗಂಟೆಯವರೆಗಿನ ದೃಶ್ಯ ನೋಡಿದರೆ ಲಾಕ್‍ಡೌನ್ ಇದೆಯೇ ಎಂಬ ಸಂದೇಹ ಮೂಡುತ್ತದೆ. ಅಷ್ಟರ ಮಟ್ಟಿಗೆ ವಾಹನ ದಟ್ಟಣೆ ಸಂಭವಿಸಿದೆ.
Advertisement
ಬೆಳಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಟ್ಟಿದ್ದನ್ನೇ ಲಾಭವನ್ನಾಗಿಸಿದ ಜನ ಬೇಕಾಬಿಟ್ಟಿ ರಸ್ತೆಯಲ್ಲಿ ಓಡಾಟ ನಡೆಸಿದರು. ಎಲ್ಲ ಪ್ರಮುಖ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಮಾಮೂಲಿ ದಿನಕ್ಕಿಂತಲೂ ಹೆಚ್ಚು ವಾಹನಗಳು ರಸ್ತೆಯಲಿದ್ದವು.
Advertisement
Advertisement
ಟ್ರಾಫಿಕ್ ಪೊಲೀಸರಿಗೆ ವಾಹನಗಳನ್ನು ಕಂಟ್ರೋಲ್ ಮಾಡೋದೇ ಸವಾಲಾಗಿತ್ತು. ಬೆಳಗ್ಗೆ 10 ಗಂಟೆಯವರೆಗೂ ಪೊಲೀಸರು ರಸ್ತೆಗಿಳಿದು ತಪಾಸಣೆ ಮಾಡುವುದಿಲ್ಲ ಎಂದು ಗೊತ್ತಿದ್ದೇ ಜನ ಈ ರೀತಿ ತಮ್ಮ ಇತರೆ ಕೆಲಸಗಳಿಗೂ ಬೇಕಾ ಬಿಟ್ಟಿ ಓಡಾಟ ನಡೆಸಿದರು. ಇದನ್ನೆಲ್ಲ ಗಮನಿಸುತ್ತಿರುವ ಪೊಲೀಸ್ ಇಲಾಖೆ ಮಾತ್ರ ಬೆಳಗ್ಗೆ 10 ಗಂಟೆಯವರೆಗೆ ಕಣ್ಣು ಮುಚ್ಚಿ ಕುಳಿತಂತಿತ್ತು.