– ವಾಹನ ಸವಾರರ ಪರದಾಟ, ಜನ ಜೀವನ ಅಸ್ತವ್ಯಸ್ತ
ಮಂಗಳೂರು: ಕಡಲನಗರಿಯಲ್ಲಿ ಕೆಲ ದಿನಗಳಿಂದ ಮುಂಜಾನೆ ಹೊತ್ತು ಭಾರೀ ಮಳೆಯಾಗುತ್ತಿದೆ. ಇಂದು ಸಹ ಬೆಳ್ಳಂ ಬೆಳಗ್ಗೆ ಮಳೆರಾಯ ಅಬ್ಬರಿಸಿ ಬೊಬ್ಬಿರಿದು ಸುರಿದಿದ್ದಾನೆ. ಇದರಿಂದಾಗಿ ಹಲವು ಅನಾಹುತಗಳು ಸಂಭವಿಸಿವೆ.
ನಗರದ ಪಂಪ್ ವೆಲ್ ಫ್ಲೈ ಓವರ್ ನ ಸರ್ವೀಸ್ ರಸ್ತೆ ಕೆರೆಯಂತಾಗಿತ್ತು. ಮಳೆ ನೀರು ಹೋಗುವುದಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಸರ್ವೀಸ್ ರಸ್ತೆ ನೀರಿನಿಂದ ಆವೃತ್ತವಾಗಿತ್ತು. ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ ಗುತ್ತಿಗೆದಾರರು ಹಾಗೂ ಸರ್ಕಾರಿ ಇಂಜಿನಿಯರ್ ವಿರುದ್ಧ ವಾಹನ ಸವಾರರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಕೆಲವೇ ಹೊತ್ತು ಭಾರೀ ಮಳೆ ಸುರಿದಿದ್ದರಿಂದ ನೀರು ಒಮ್ಮೆಲೆ ತುಂಬಿಕೊಂಡಿತ್ತು.
ಇದೇ ರೀತಿ ಹಲವು ರಸ್ತಗಳು ನೀರಿನಿಂದ ಆವೃತವಾಗಿದ್ದವು, ರಸ್ತೆಯಲ್ಲಿ ಎಲ್ಲಿ ನೋಡಿದರೂ ನೀರು ತುಂಬಿತ್ತು. ಇದರಿಂದಾಗಿ ಕೆಲ ಕಾಲ ವಾಹನ ಸವಾರರು ಪರದಾಡುವಂತಾಯಿತು. ಬೈಕ್ ಸವಾರರ ಪರಿಸ್ಥಿತಿಯಂತೂ ಹೇಳತೀರದಂತಾಗಿತ್ತು.