ಮಂಗಳೂರಿನಲ್ಲಿ ಕುರಿ ಮಾಂಸದ ಜೊತೆ ಗೋಮಾಂಸ ಮಿಶ್ರಣ ಆರೋಪ

Public TV
1 Min Read
mng 6

– ಮಟನ್ ಸ್ಟಾಲ್‍ಗಳಿಗೆ ಮೇಯರ್ ದಾಳಿ

ಮಂಗಳೂರು: ನಗರದ ಕೆಲವು ಕುರಿ ಮಾಂಸದ ಅಂಗಡಿಯಲ್ಲಿ ಗೋಮಾಂಸ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದಾರೆ ಅನ್ನೋ ಆರೋಪ ಹಿನ್ನೆಲೆಯಲ್ಲಿ ಇಂದು ಮೇಯರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಇತ್ತೀಚೆಗೆ ಕೆಲವು ಮಟನ್ ಅಂಗಡಿಗಳಲ್ಲಿ ಕುರಿ ಮಾಂಸದ ಜೊತೆಗೆ ಗೋಮಾಂಸ ಮಿಶ್ರಣ ಮಾಡಿ ಕೊಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇಂದು ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ ಅವರ ನೇತೃತ್ವದಲ್ಲಿ ಅಧಿಕಾರಿಗಳು ನಗರದ ಕಸಾಯಿಖಾನೆ, ಉರ್ವಾ ಮಾರ್ಕೆಟ್, ಉರ್ವಾ ಸ್ಟೋರ್ ಮಾರ್ಕೆಟ್‍ಗಳಿಗೆ ದಾಳಿ ನಡೆಸಿದ್ದಾರೆ.

mng 2 2

ಈ ವೇಳೆ ಮಳಿಗೆಗಳ ಪರವಾನಗಿ ಮತ್ತು ಬಿಲ್‍ಗಳ ಪರಿಶೀಲನೆ ನಡೆಸಿದ ಮೇಯರ್, ಅಕ್ರಮ ಮಾರಾಟ ಮತ್ತು ವಧೆಗಳ ಬಗ್ಗೆ ನಿಗಾ ಇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಮಾಂಸದಲ್ಲಿ ಕಡ್ಡಾಯ ಸೀಲ್ ಮತ್ತು ಬಿಲ್ ನೀಡಲು ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಅಕ್ರಮ ಮಾಂಸ ಮಾರಾಟ ನಡೆಸಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಈ ಸಂದರ್ಭ ನೀಡಲಾಯಿತು.

Share This Article