ಮಂಗಳೂರು: ಮುತ್ತಿನಂತೆ ಹೊಳೆಯುವ ಇವಳ ನೀಲಿಯ ಮೊಗ, ಸಮುದ್ರದ ಚಿಪ್ಪುಗಳಿಂದ ರಚಿಸಿದ ಕಿರೀಟ. ಮಾನಸ ಸರೋವರದಲ್ಲಿ ಈಜಾಡಬೇಕಿದ್ದ ಈಕೆ, ಒಂದೇ ಸಮನೆ ಕಳೆದ ವಾರದಿಂದ ಕರಾವಳಿ ಜನರ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾಳೆ.
ಈಕೆ ನಿಜವಾದ ಮತ್ಸ್ಯ ಕನ್ಯೆ ಅಂದುಕೊಂಡಿರಾ, ಅಲ್ಲ, ಇದು ಮೇಕ್ ಓವರ್ ಮರ್ಮೈಡ್ ಪ್ರಿಯಾ ಪವನ್ ಬಾಳಿಗ ಅವರ ಮೇಕಪ್ ಕೈಚಳಕ. ಹೌದು, ಲಾಕ್‍ಡೌನ್ ಸಮಯದಲ್ಲಿ ಟೈಮ್ ಪಾಸ್‍ಗೆಂದು ಏನೇನೋ ಪ್ರಯೋಗ ಮಾಡುತ್ತಾರೆ. ಇನ್ನೂ ಹಲವರು ಕಾಲಹರಣ ಸಹ ಮಾಡುತ್ತಾರೆ. ಆದರೆ ಪ್ರಿಯಾ ಅವರು ಲಾಕ್‍ಡೌನ್ ಸಮಯವನ್ನು ಸೆಲ್ಪ್ ಮೇಕಪ್‍ನ ಥೀಮ್ ಫ್ಯಾಂಟಸಿ ಮೇಕಪ್ ಪ್ರಯೋಗದಲ್ಲಿ ಕಳೆದಿದ್ದಾರೆ.
Advertisement
Advertisement
ಇದೀಗ ಪ್ರಿಯಾ ಅವರ ಸೆಲ್ಪ್ ಮೇಕಪ್‍ನ ಥೀಮ್ ಫ್ಯಾಂಟಸಿ ಮೇಕಪ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮತ್ಸ್ಯ ಕನ್ಯೆಯ ಕಲ್ಪನೆಯನ್ನೂ ಮೀರಿಸುವ ರೀತಿಯಲ್ಲಿ ಪ್ರಿಯಾ ಅವರು ಪೇಕಪ್ ಮೂಲಕ ತೋರಿಸಿದ್ದಾರೆ. ಇದನ್ನು ಕಂಡ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
Advertisement
ತಮ್ಮ ಮೇಕ್ ಓವರ್ ಪರಿಶ್ರಮದ ಬಗ್ಗೆ ಸ್ವತಃ ಪ್ರಿಯಾ ಅವರು ಅನುಭವ ಹಂಚಿಕೊಂಡಿದ್ದಾರೆ. ಭಾರತೀಯರ ಮುಖದ ಚರ್ಮದ ವಿನ್ಯಾಸವು ತುಂಬಾ ಸವಾಲಿನದ್ದಾಗಿದ್ದು, ಈ ಮೇಕ್ ಓವರ್‍ನಲ್ಲಿ ಹಸಿರು, ನೀಲಿ, ನೇರಳೆ, ಗುಲಾಬಿ ಬಣ್ಣಗಳ ಸಂಯೋಜನೆಯು ತುಂಬಾ ಆಕರ್ಷಕ ಹಾಗೂ ಅದರೊಂದಿಗೆ ಸರಿಸಮಾನವಾದ ಗಾತ್ರ, ಆಕಾರ, ಬಣ್ಣ ಸಂಯೋಜಿತ ಚುಕ್ಕಿಗಳನ್ನು ಬಿಡಿಸುವುದು ದೊಡ್ಡ ಸವಾಲು ಎಂದಿದ್ದಾರೆ.
Advertisement
ಈ ರೀತಿಯ ಮೇಕ್ ಓವರ್ ಗೆ ಒಪ್ಪುವಂತಹ ಬಟ್ಟೆ, ಕಿರೀಟ, ಆಭರಣಗಳಿಗಾಗಿ ಹಗಲಿರುಳು ದುಡಿದಿದ್ದು, ಈ ಮೇಕ್ ಓವರ್‍ಗೆ ಬಳಸಿದ ಕಿರೀಟವನ್ನು ಪತಿ ಹಾಗೂ ನಾನು ಸೇರಿ ಮಾಡಿದ್ದೇವೆ. ಈ ಕಿರೀಟವನ್ನು ತಯಾರಿಸಲು ತೆಗೆದುಕೊಂಡ ದಿನಗಳು ಹಲವು. ಕಿರೀಟಕ್ಕೆ ಬಳಸಿದ ಮುತ್ತು, ವೈವಿಧ್ಯ ರೀತಿಯ ಸಮುದ್ರ ಚಿಪ್ಪುಗಳನ್ನು ಸ್ವತಃ ನನ್ನ ಪತಿ ಪವನ್ ಬಾಳಿಗ ಅವರು ಸಸಿಹಿತ್ಲು ಮುಂಡಾ, ಕಾಪು, ಮುಲ್ಕಿ, ಪಡುಬಿದ್ರಿ ಸಮುದ್ರ ಕಿನಾರೆಗಳಿಂದ ಸಂಗ್ರಹಿಸಿ ಒಟ್ಟು 2 ಚೀಲದಷ್ಟು ತಂದಿದ್ದರು. ಈ ಕಿರೀಟದ ತೂಕ 528 ಗ್ರಾಂ.ಗಳು ಅಂದರೆ ಅರ್ಧ ಕೆಜಿಯಷ್ಟು ಎಂದು ವಿವರಿಸಿದರು.
ಪ್ರಿಯಾ ಅವರ ಈ ಸಾಧನೆ ಹಾಗೂ ಪರಿಶ್ರಮದ ಹಿಂದಿರೋ ಬಲವಾದ ಶಕ್ತಿ ಪತಿ ಉದ್ಯಮಿ ಪವನ್ ಬಾಳಿಗ ಹಾಗೂ ಕುಟುಂಬ ಸದಸ್ಯರು. ಇದರ ಜೊತೆ ಕೈ ಜೋಡಿಸಿದ್ದು ಇವರ ತಾಯಿ ಜ್ಯೋತಿ ಭಟ್. ಪ್ರಿಯಾರ ಅವಳಿ ಮಕ್ಕಳನ್ನ ಸಂಭಾಳಿಸುತ್ತಾ ಪ್ರಿಯಾರಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರಸ್ತುತ ಮಂಗಳೂರಿನ ಬಹುಬೇಡಿಕೆಯುಳ್ಳ ಮೇಕಪ್ ಆರ್ಟಿಸ್ಟ್ ಲಿಸ್ಟ್‍ನಲ್ಲಿ ಪ್ರಿಯಾ ಇದ್ದಾರೆ. ಡಿಫರೆಂಟ್ ಆಗಿರೋ ಮೇಕಪ್ ವೀಡಿಯೋಗಳನ್ನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
3 ವರ್ಷಗಳ ಹಿಂದೆ ಚೇತನಾ ಬ್ಯೂಟಿ ಲಾಂಜ್‍ನಲ್ಲಿ ಮೇಕಪ್ ಕೋರ್ಸ್ ಕಲಿಯುತ್ತಿರುವಾಗ ಸಂಸ್ಥೆಯ ಘಟಿಕೋತ್ಸವದಲ್ಲಿ ಏನಾದರೂ ಹೊಸತನವನ್ನು ಪ್ರಯತ್ನಿಸಬೇಕು ಎಂಬ ಕನಸನ್ನು ಇಟ್ಟುಕೊಂಡು ಫ್ಯಾಂಟಸಿ ಮೇಕಪ್ ಮಾಡಲು ಮುಂದಾದರು. ಫ್ಯಾಂಟಸಿ ಮೇಕಪ್ ಎಂಬ ವಿಭಾಗದಲ್ಲಿ ತನ್ವಿ ಶೆಟ್ಟಿ ಎಂಬ ರೂಪದರ್ಶಿಯ ಮೇಲೆ ಈ ಮತ್ಸ್ಯ ಕನ್ಯೆಯ ಮೇಕ್ ಓವರ್ ಮಾಡಿದ್ದರು. ಈ ರೀತಿಯ ಮೇಕಪ್ ಮಾಡಲು ನನ್ನನ್ನು ಪ್ರೋತ್ಸಾಹಿಸಿದ್ದು, ನನ್ನ ಗುರುಗಳಾದ ಚೇತನಾ ಮೇಡಂ ಎಂದು ಪ್ರಿಯಾ ಪವನ್ ಬಾಳಿಗ ಹೇಳಿದ್ದಾರೆ.