– ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಪರೇಡ್
– ಜನವರಿ 26ರಂದು ಬೆಂಗಳೂರು ಲಾಕ್
– 25 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್ ಪರೇಡ್
ಬೆಂಗಳೂರು: ಗಣರಾಜ್ಯೋತ್ಸವ ರಜೆ ಅಂತಾ ಹೊರಹೋಗುವ ಮುನ್ನ ಜಾಗೃಕತರಾಗಿರಿ. ಕೇಂದ್ರದ ಕೃಷಿ ಮಸೂದೆಯ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ನೇತೃತ್ವದಲ್ಲಿ ಟ್ರ್ಯಾಕ್ಟರ್ ಪರೇಡ್ ಮೂಲಕ ಬೆಂಗಳೂರಿನಲ್ಲಿ ರೈತರ ಮಹಾ ರ‍್ಯಾಲಿ ನಡೆಯಲಿದೆ.
Advertisement
ಜನವರಿ 26ರಂದು ಮಂಗಳವಾರ ಬೆಂಗಳೂರಲ್ಲಿ ಓಡಾಡೋರು ಎಚ್ಚರವಾಗಿದ್ದರೆ ಒಳಿತು. ಕೇಂದ್ರದ ಕೃಷಿ ಮಸೂದೆಯ ವಿರೋಧಿಸಿ ಅನ್ನದಾತರ ಅಷ್ಟದಿಗ್ಬಂಧನ ಮಾಡಲಿದ್ದಾರೆ. ರಾಜ್ಯದ ಸಾವಿರಾರು ರೈತರು ಟ್ರ್ಯಾಕ್ಟರ್ ಪರೇಡ್ ಮೂಲಕ ಬೆಂಗಳೂರಿನಲ್ಲಿ ರೈತರು ಮಹಾ ರ‍್ಯಾಲಿ ಮಾಡಲಿದ್ದಾರೆ.
Advertisement
Advertisement
ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ನೇತೃತ್ವದಲ್ಲಿ ನಡೆಯುತ್ತಿರುವ ಪೆರೇಡ್‍ನಲ್ಲಿ 25 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್, ವಾಹನಗಳಲ್ಲಿ ರೈತರು ರ‍್ಯಾಲಿ ಮಾಡಲಿದ್ದಾರೆ. ನೈಸ್ ರೋಡ್ ಜಂಕ್ಷನ್‍ನಿಂದ ಫ್ರೀಡಂ ಪಾರ್ಕ್‍ವರೆಗೆ ರ‍್ಯಾಲಿ ನಡೆಸಲು ಸಿದ್ಧತೆ ನಡೆದಿದೆ. ಪೊಲೀಸರು ತಡೆದರೆ ಹೋರಾಟ ಕ್ರಾಂತಿಯ ರೂಪ ಪಡೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement
ಬೆಂಗಳೂರಿನಲ್ಲಿ ಗಣರಾಜ್ಯೋತ್ಸವದ ದಿನ ಅನ್ನದಾತರು ನಡೆಸಲಿರುವ ಟ್ರ್ಯಾಕ್ಟರ್ ರ‍್ಯಾಲಿಗೆ ಪೊಲೀಸ್ ಪರ್ಮಿಷನ್ ಸಿಗುವುದು ಅನುಮಾನವಾಗಿದೆ. ಗಣರಾಜ್ಯೋತ್ಸವದ ದಿನ ಪೆರೇಡ್‍ನಲ್ಲಿ ಸಾವಿರಾರು ಪೊಲೀಸರು ಭಾಗಿಯಾಗಿರುತ್ತಾರೆ. ಈ ಹಿನ್ನೆಲೆ ಟ್ರ್ಯಾಕ್ಟರ್ ರ‍್ಯಾಲಿಗೆ ಅನುಮತಿ ನೀಡದಿರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ದೆಹಲಿಯಲ್ಲೂ ಪ್ರತಿಭಟನೆ: ಜ.26ರಂದು ಗಣರಾಜ್ಯೋತ್ಸವ ಪರೇಡ್‍ಗೆ ಧಕ್ಕೆ ಮಾಡದಂತೆ ಷರತ್ತುಬದ್ಧ ನಿಯಮದ ಮೇಲೆ ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಪೊಲೀಸರ ಒಪ್ಪಿಗೆ ನೀಡಿದ್ದಾರೆ. ಪಂಜಾಬ್‍ನಿಂದ ಮನೆಗೊಂದರಂತೆ ಟ್ರ್ಯಾಕ್ಟರ್ ತರಲು ಕರೆ ನೀಡಲಾಗಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಿಂದ ಬರುತ್ತಿರುವ ಹೆಚ್ಚುವರಿ ಟ್ರ್ಯಾಕ್ಟರ್ ರ‍್ಯಾಲಿಗೆ ನಿಗಧಿತ ಮಾರ್ಗ ಸೂಚಿಸಲಿರುವ ಪೊಲೀಸರು ನಿಗಧಿತ ಮಾರ್ಗದಲ್ಲಿ ಶಾಂತಿಯುತ ಪ್ರತಿಭಟನಾ ನಡೆಸಲು ತೀರ್ಮಾನ ಮಾಡಲಾಗಿದೆ. ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ಬೃಹತ್ ರ‍್ಯಾಲಿ ನಡೆಯಲಿದೆ.