ಶಿಮ್ಲಾ: ಸವಾರನೋರ್ವ ಬೈಕ್ ಹೆಗಲ ಮೇಲೆ ಹೊತ್ತು ರಸ್ತೆ ದಾಟಿರುವ ಘಟನೆ ಹಿಮಾಚಲ ಪ್ರದೇಶದ ಚಂಬಾ ಕಣಿವೆಯಲ್ಲಿ ನಡೆದಿದೆ. ಸದ್ಯ ಬೈಕ್ ಸವಾರನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಕಳೆದೊಂದು ವಾರದಿಂದ ಹಿಮಾಚಲ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಹುತೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಕಣಿವೆ ಭಾಗಗಳಲ್ಲಿ ರಸ್ತೆ ಮೇಲೆ ಅಪಾರ ಪ್ರಮಾಣದ ಮಣ್ಣು ಬಿದ್ದಿದ್ದರಿಂದ ಸಂಚಾರ ಸ್ಥಗಿತಗೊಂಡಿದೆ. ಇದನ್ನೂ ಓದಿ: ಪತಿ ಕಾಮಪ್ರಚೋದಕ ಚಿತ್ರಗಳನ್ನು ತೆಗೆಯುತ್ತಿದ್ದರೆ ವಿನಃ ಅಶ್ಲೀಲ ಚಿತ್ರವಲ್ಲ: ಶಿಲ್ಪಾ ಶೆಟ್ಟಿ
ಚಂಬಾದ ತಿಸ್ಸಾ ಎಂಬಲ್ಲಿ ರಸ್ತೆ ಮೇಲೆ ಮಣ್ಣು ಕುಸಿದು ನೀರು ಹರಿಯುತ್ತಿತ್ತು. ರಸ್ತೆಯ ಮತ್ತೊಂದು ಕಡೆ ಸಾಗಬೇಕಿದ್ದ ಸವಾರ ತನ್ನ ದ್ವಿಚಕ್ರ ವಾಹನವನ್ನು ಹೆಗಲ ಮೇಲೆ ಹೊತ್ತು, ಕಣಿವೆಯ ಅಂಚಿನಲ್ಲಿ ನಡೆದಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರು ನಿಜವಾದ ಬಾಹುಬಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಜೀವ ಪಣಕ್ಕಿಟ್ಟು ಈ ಸಾಹಸ ಮಾಡುವ ಅಗತ್ಯವಿರಲಿಲ್ಲ ಎಂದು ಬಾಹುಬಲಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಮಳೆಯ ಆರ್ಭಟಕ್ಕೆ 138 ಮಂದಿ ಸಾವು