– ಮುಂದುವರಿದ ಸಾರಾ ವರ್ಸಸ್ ರೋಹಿಣಿ ಸಿಂಧೂರಿ ಜಟಾಪಟಿ
ಮೈಸೂರು : ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾರಾ ಮಹೇಶ್ ನಡುವಿನ ಜಟಾಪಟಿ ಮುಂದುವರಿದಿದೆ. ಮಾಧ್ಯಮಗಳ ವಾಟ್ಸಪ್ ಗ್ರೂಪ್ ಗಳಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರೋ ರೋಹಿಣಿ ಸಿಂಧೂರಿ, ಡಿಸಿ ಅಧಿಕೃತ ವಸತಿನಿಲಯದಲ್ಲಿ ಸ್ವಿಮಿಂಗ್ ಪೂಲ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಸಲ್ಲಿಸಿರುವ ವರದಿಗೆ ಸ್ವಾಗತಿಸಿರುವ ರೋಹಿಣಿ ಸಿಂಧೂರಿ, ಮೈಸೂರಿನಲ್ಲಿ ನಡೆದಿರೋ ಭೂ ಅಕ್ರಮಗಳ ಸಮಗ್ರ ತನಿಖೆಗೂ ಒತ್ತಾಯಿಸಿದ್ದಾರೆ.
ಈ ಸಂಬಂಧ ಜೂನ್ 11 ರಂದು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದ ರೋಹಿಣಿ ಸಿಂಧೂರಿ ಆ ಪತ್ರವನ್ನು ಮಾಧ್ಯಮಗಳಿಗೆ ವಾಟ್ಸಪ್ ಗ್ರೂಪ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಡಿಸಿ ವಸತಿ ಗೃಹದಲ್ಲಿ ಸ್ವಿಮ್ಮಿಂಗ್ ಫೂಲ್ ನಿರ್ಮಾಣ ಕುರಿತ ತಾಂತ್ರಿಕ ದೋಷಗಳ ಕುರಿತು ಸವಿಸ್ತಾರ ವರದಿ ನೀಡಿರುವುದು ಸ್ವಾಗತಾರ್ಹ ವಿಚಾರ ಎಂದಿದ್ದಾರೆ.
Advertisement
Advertisement
ಮೈಸೂರು ತಾಲೂಕು, ಕಸಬಾ ಹೋಬಳಿ, ದಟ್ಟ ಗಳ್ಳಿ ಸರ್ವೇ ನಂ.123ನಲ್ಲಿ ಇರುವ ಸಾ.ರಾ. ಚೌಟ್ರಿಗೆ ಸಂಬಂಧಿಸಿದಂತೆ ಗೋಲ್‍ಮಾಲ್ ನಡೆದಿದೆ. ಸರಿಯಾದ ದಾಖಲೆಗಳು ಇಲ್ಲ. ಹಾಗಾಗಿ ಸರ್ಕಾರಕ್ಕೆ ನಷ್ಟವಾಗಲಿದ್ದು, ಸಾ.ರಾ.ಮಹೇಶ್ ಅವರಿಗೆ ಲಾಭವಾಗುತ್ತದೆ. ಅಲ್ಲದೆ ಲಿಂಗಾಬುದಿ ಕೆರೆಯ ಬಳಿಯ ಸರ್ವೆ ನಂಬರ್ ನಲ್ಲಿ ಶಾಸಕ ಸಾ.ರಾ.ಮಹೇಶ್, ಮುಡಾ ಅಧ್ಯಕ್ಷ ರಾಜೀವ್ ಅವರು ಪಾಲುದಾರಿಕೆಯಲ್ಲಿ ನಿಯಮ ಉಲ್ಲಂಘಿಸಿ ರೆಸಾರ್ಟ್ ಮಾಡಲು ಮುಂದಾಗಿದ್ದಾರೆ. ಯಾವುದೇ ಕೆರೆಯಿಂದ 75 ಮೀಟರ್ ವರೆಗೆ ಕಟ್ಟಡ ಕಾಮಗಾರಿಗಳನ್ನು ನಿಷೇಧಿಸಿ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದ್ದು, ಇವರು ಇದಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ. ಹಾಗಾಗಿ ಸ್ವತಂತ್ರವಾಗಿ ಸ್ಥಳ ಪರಿಶೀಲನೆ ಮಾಡಿ, ವರದಿ ನೀಡುವಂತೆ ಪತ್ರ ಬರೆದಿದ್ದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ರೋಹಿಣಿ ಸಿಂಧೂರಿ ಸ್ವಿಮ್ಮಿಂಗ್ ಪೂಲ್ ವಿವಾದ – ಟ್ವಿಟ್ಟರ್‌ನಲ್ಲಿ ತಿವಿದ ಐಜಿಪಿ ರೂಪಾ
Advertisement
Advertisement
ಸಾ.ರಾ.ಕಲ್ಯಾಣ ಮಂಟಪದ ಜಾಗವು ವಸತಿ ಉದ್ದೇಶಕ್ಕೆ ಅನುಮೋದನೆ ಪಡೆದಿದ್ದು, ವ್ಯವಹಾರಿಕ ದೃಷ್ಟಿಯಿಂದ ಕಲ್ಯಾಣ ಮಂಟಪ ಮಾಡಲಾಗಿದೆ. ಹಾಗಾಗಿ ಪರಿಶೀಲನೆ ನಡೆಸಲು ಮುಡಾ ಅಧಿಕಾರಿಗಳಿಗೆ ನಾನು ನಿರ್ದೇಶನ ನೀಡಿದ್ದೆ. ಅಲ್ಲದೇ ಮುಡಾ ಅಧ್ಯಕ್ಷ ಎಚ್.ಎ.ರಾಜೀವ್ ನೂರಾರು ಅಕ್ರಮ ಆಸ್ತಿಗಳಿಗೆ ಅನುಮತಿ ನೀಡುವ ಮೂಲಕ ತಮ್ಮ ವೈಯಕ್ತಿಕ ಲಾಭಕ್ಕೆ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿ ಕೊಂಡಿದ್ದಾರೆ. ಇದರ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿಯನ್ನ ವೀರಪ್ಪನ್‍ಗೆ ಹೋಲಿಸಿದ ಬಿಜೆಪಿ ಮುಖಂಡ ಮಲ್ಲೇಶ್