ಯಾದಗಿರಿ: ಭೀಮಾ ನದಿಯಲ್ಲಿ ಈಜಾಡಲು ತೆರಳಿ ನೀರು ಪಾಲಾಗಿದ್ದ ನಾಲ್ವರು ಹುಡುಗರ ಶವ ಪತ್ತೆಯಾಗಿವೆ. ಎನ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ ಮತ್ತು ನುರಿತ ಮೀನುಗಾರರ ತಂಡಗಳು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ನಾಲ್ವರು ಹುಡುಗರ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಇದನ್ನೂ ಓದಿ: ಈಜಲು ಭೀಮಾ ನದಿಗಿಳಿದ ನಾಲ್ವರು ನೀರುಪಾಲು
ಅಮಾನ್ (16), ಅಯಾನ್ (16), ರೆಹಮಾನ್ (16), ಕಲಬುರಗಿ ಮೂಲದ ರೆಹಮಾನ್ (15) ಮೃತ ಹುಡುಗರು. ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಸಮೀಪದ ಭೀಮಾ ನದಿಯಲ್ಲಿ ನಾಲ್ವರು ಸ್ನೇಹಿತರು ಭಾನುವಾರ ಸಂಜೆ ಈಜಾಡಲು ಹೋಗಿ ನೀರು ಪಾಲಾಗಿದ್ದರು.
Advertisement
Advertisement
ಹುಡುಗರ ಪತ್ತೆಗಾಗಿ ಇಂದು ಬೆಳಗ್ಗೆಯಿಂದ ಹೈದರಾಬಾದಿನ ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳ ಭೀಮಾನದಿಯಲ್ಲಿ ಬೋಟ್‍ಗಳ ಮೂಲಕ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ನೀರು ಪಾಲಾಗಿದ್ದ ಅಮಾನ್, ಅಯಾನ್, ರೆಹಾನ್, ಇರ್ಫಾನ್ ಹುಡುಗರ ಶವ ಪತ್ತೆ ಮಾಡಲಾಗಿದೆ.
Advertisement
Advertisement
ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ, ಎಸ್‍ಪಿ ಋಷಿಕೇಶ್ ಭಗವಾನ್ ಸೋನವಣೆ, ಎಸಿ ಶಂಕರಗೌಡ ಸೋಮನಾಳ ಅವರ ಮಾರ್ಗದರ್ಶನದಲ್ಲಿ ಈ ಶೋಧ ಕಾರ್ಯಾಚರಣೆ ನಡೆದಿದೆ. ಮೃತದೇಹಗಳನ್ನು ಹೊರತರುತ್ತಿದ್ದಂತೆ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.