ಮುಂಬೈ: ನಗರದ ಎಲ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಂಡುಬರುವ ಭಿಕ್ಷುಕರನ್ನು ಗಮನಿಸಿ ಅವರನ್ನು ಕರೆತಂದು ಚೆಂಬೂರಿನಲ್ಲಿ ಸ್ಥಾಪಿಸಿರುವ ವಿಶೇಷ ಮನೆಗೆ ಸೇರಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಮೂಲಕ ನಗರದಲ್ಲಿ ಭಿಕ್ಷಾಟನೆಗೆ ಬ್ರೇಕ್ ಹಾಕುವ ಕಾರ್ಯಕ್ಕೆ ಸನ್ನದ್ಧವಾಗಿದೆ.
Advertisement
ಮುಂಬೈ ನಗರ ಜಂಟಿ ಪೊಲೀಸ್ ಆಯುಕ್ತ ವಿಶ್ವಾಸ್ ನಾಗ್ರೆ ಪಾಟೀಲ್ ಅವರ ಸೂಚನೆಯ ಮೇರೆಗೆ ನಗರದ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಭಿಕ್ಷುಕರನ್ನು ಪತ್ತೆ ಮಾಡಿ ಕರೆತಂದು ಕೋವಿಡ್ ಟೆಸ್ಟ್ ಮಾಡಿಸಿ ಚೆಂಬೂರಿನಲ್ಲಿ ಸ್ಥಾಪಿಸಿರುವ ವಿಶೇಷ ಮನೆಯಲ್ಲಿ ಆಶ್ರಯ ನೀಡುವಂತೆ ತಿಳಿಸಿದ್ದಾರೆ. ಇದರೊಂದಿಗೆ ನಗರದಲ್ಲಿ ಭಿಕ್ಷಾಟನೆಯನ್ನು ನಿಷೇಧ ಮಾಡಲು ಹೊರಟಿದ್ದಾರೆ.
Advertisement
ಬಾಂಬೆ ಭಿಕ್ಷಾಟನೆ ಕಾಯ್ದೆ 1959ರ ಪ್ರಕಾರ ನಗರದಲ್ಲಿ ಭಿಕ್ಷಾಟನೆ ನಿಷೇಧಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಭಿಕ್ಷಾಟನೆ ಒಂದು ಸಾಮಾಜಿಕ ಅಪರಾಧ ಎಂದು ತಿಳಿಸಿ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಿ ಕೋರ್ಟ್ ನ ಆದೇಶದಂತೆ ಕೋವಿಡ್ ಟೆಸ್ಟ್ ಮಾಡಿಸಿ ನಂತರ ಭಿಕ್ಷುಕರ ನೂತನ ಮನೆಗೆ ಸೇರಿಸಲು ಡಿಸಿಪಿ ಎಸ್ ಚೈತನ್ಯ ಆದೇಶಿಸಿದ್ದಾರೆ.
Advertisement
Advertisement
ಭಿಕ್ಷಾಟನೆ ಸಾಮಾಜಿಕ ಅಪರಾಧವಾಗಿದ್ದು ಚಿಕ್ಕ ಮಕ್ಕಳನ್ನು ಭಿಕ್ಷಾಟನೆಗೆ ತಲ್ಲುತ್ತಿರುವುದು ಕಂಡು ಬಂದಿದ್ದು, ಇದು ಮುಂಬೈ ನಗರಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಸಾರ್ವಜನಿಕ ವರ್ಗದಿಂದ ಪ್ರಶ್ನೆ ಬಂದಿದ್ದು ಯಾವ ರೀತಿ ಭಿಕ್ಷುಕರನ್ನು ಹೊಸ ಮನೆಯಲ್ಲಿ ನೋಡಿಕೊಳ್ಳುವ ವ್ಯವಸ್ಥೆ ಇದೆ ಎಂದಿದ್ದಾರೆ. ಈಗಾಗಲೇ ಭಿಕ್ಷುಕರಿಗಾಗಿ ಚೆಂಬೂರಿನಲ್ಲಿ ಹೊಸದಾಗಿ ನಿರ್ಮಿಸುವ ಮನೆಯಲ್ಲಿ ಮೊದಲು ಕೋವಿಡ್ ಟೆಸ್ಟ್ ನಡೆಸಿ ನಂತರ ಅದನ್ನು ಪುನರ್‍ಶ್ಚೇತನ ಕೇಂದ್ರವಾಗಿಸುವ ಗುರಿ ಹೊಂದಲಾಗಿದೆ ಎಂದು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಅಭಾ ಸಿಂಗ್ ಹೇಳಿದ್ದಾರೆ. ಪ್ರಸ್ತುತ 14 ಮಂದಿ ಭಿಕ್ಷುಕರನ್ನು ಚೆಂಬೂರಿನ ಪುನರ್‌ಶ್ಚೇತನ ಕೇಂದ್ರಕ್ಕೆ ಪೊಲೀಸರು ದಾಖಲಿಸಿದ್ದಾರೆ.