ಬೆಂಗಳೂರು: ನಟಿ ಮೇಘನಾ ರಾಜ್ ಅವರು ತಂದೆಯ ಹುಟ್ಟುಹಬ್ಬಕ್ಕೆ ಭಾವನಾತ್ಮಕವಾದ ಸಾಲುಗಳನ್ನು ಬರೆದುಕೊಂಡು ಶುಭಕೋರಿದ್ದಾರೆ.
ತಂದೆಯ ಬರ್ತ್ ಡೇ ಹಿನ್ನೆಲೆಯಲ್ಲಿ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿರುವ ಕುಟ್ಟಿಮಾ, ಪ್ರೀತಿಯ ಅಪ್ಪಾ… ನಾನು ಅವಲಂಬಿಸುವ ಏಕೈಕ ಭುಜ ನಿಮ್ಮದು. ನಿಮ್ಮ ಜನ್ಮದಿನದಂದು ನಾನು ಈ ವಿಷಯವನ್ನು ಇಡೀ ಜಗತ್ತಿಗೆ ಹೇಳಲು ಇಷ್ಟಪಡುತ್ತೇನೆ. ನಾನು ನಿಮ್ಮನ್ನು ಹೆಚ್ಚು ಪ್ರೀತಿಸುತ್ತೇನೆ. ಲವ್ ಯೂ ಅಪ್ಪಾ ಎಂದು ಬರೆದುಕೊಂಡು ತಂದೆಯ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಸುಂದರ್ ರಾಜ್ ಅವರು 69ನೇ ವರ್ಷದ ಹುಟ್ಟುಹಬ್ಬವನ್ನು ನಿನ್ನೆ ಆಚರಿಸಿಕೊಂಡಿದ್ದಾರೆ. ಹೀಗಾಗಿ ಮೇಘನಾ ಕೆಲ ಸಾಲುಗಳನ್ನು ಬರೆದುಕೊಂಡಿದ್ದು, ಅಭಿಮಾನಿಗಳು ಕೂಡ ಸುಂದರ್ ರಾಜ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
View this post on Instagram
ಸುಂದರ್ ರಾಜ್ ಅವರ ಕುಂಟುಂಬದಲ್ಲಿ ಇವರ ಪತ್ನಿ, ಮಗಳು ಎಲ್ಲರೂ ಕಲಾವಿದರಾಗಿದ್ದಾರೆ. ಸುಂದರ್ ರಾಜ್ ಅವರು ತಮ್ಮದೇ ಆಗಿರುವ ಉತ್ತಮವಾದ ನಟನಾ ಶೈಲಿಯ ಮೂಲಕವಾಗಿ ಕಲಾದೇವಿಯ ಸೇವೆ ಮಾಡುತ್ತಾ ಕನ್ನಡ ಸಿನಿಪ್ರಿಯರನ್ನು ರಂಜಿಸುತ್ತಾ ಬಂದಿದ್ದಾರೆ. ಕಾಮಿಡಿ ಪಾತ್ರಗಳ ಮೂಲಕವಾಗಿ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗಿದ್ದಾರೆ.
ಚಿರುಸರ್ಜಾನನ್ನು ಕಳೆದುಕೊಂಡು ದುಃಖದಲ್ಲಿದ್ದ ಈ ಕುಟುಂಬ ಮೊಮ್ಮಗನ ಆಗಮನದಿಂದ ಸಂತೋಷವಾಗಿದ್ದಾರೆ. ಚಿರುಸರ್ಜಾನನ್ನು ಕಳೆದುಕೊಂಡ ಮಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಸುಃಖ-ದುಃಖದಲ್ಲಿ ಸುಂದರ್ ರಾಜ್ ಭಾಗಿಯಾಗುತ್ತಿದ್ದಾರೆ.