ಬೀದರ್: ಈಗಾಗಲೇ ಗಡಿ ಜಿಲ್ಲೆ ಬೀದರ್ ನಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಇಂದು ಅಧಿಕೃತವಾಗಿ ವರುಣ ಅಬ್ಬರಿಸಿದ್ದಾನೆ.
ಸತತ 2 ಗಂಟೆಗಳಿಂದ ಸುರಿದ ಮಹಾಮಳೆಗೆ ಬೀದರ್ ನಲ್ಲಿ ಅವಾಂತರ ಸೃಷ್ಟಿಯಾಗಿದ್ದು ಜಿಲ್ಲಾ ರಂಗ ಮಂದಿರ ಸಂಪೂರ್ಣವಾಗಿ ಜಲಾವೃತಗೊಂಡಿದೆ. ನಗರದಲ್ಲಿರುವ ಚನ್ನಬಸವ ಪಟ್ಟದ್ದೆವರ ಜಿಲ್ಲಾ ರಂಗಮಂದಿರದಲ್ಲಿ 4 ರಿಂದ 5 ಅಡಿಯಷ್ಟು ನೀರು ತುಂಬಿ ಸಂಪೂರ್ಣವಾಗಿ ಜಲಾವೃತಗೊಂಡಿದೆ.
Advertisement
Advertisement
ಔರಾದ್, ಭಾಲ್ಕಿ, ಹುಮ್ನಬಾದ್ ಸೇರಿದಂತೆ ಜಿಲ್ಲೆಯ ಹಲವೆಡೆ ವರುಣ ಅಬ್ಬರಿಸುತ್ತಿದ್ದಾನೆ. ಕೇವಲ ಎರಡು ಗಂಟೆ ಸುರಿದ ಮಳೆಗೆ ರಂಗ ಮಂದಿರ ಜಲಾವೃತಗೊಂಡಿದೆ. ಪ್ರತಿ ವರ್ಷ ದಂತ ಈ ವರ್ಷವು ಅಧಿಕಾರಿಗಳ ಮಹಾ ನಿರ್ಲಕ್ಷ್ಯದಿಂದಾಗಿ ಜಿಲ್ಲಾ ರಂಗಮಂದಿರ ಜಲಾವೃತಗೊಂಡಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಿಲ್ಲೆಯ ಜನ್ರ ಹಿಡಿಶಾಪ ಹಾಕುತ್ತಿದ್ದಾರೆ. ಇದನ್ನೂ ಓದಿ: ಮೂಕಪ್ರಾಣಿಗಳೊಂದಿಗೆ ನಮ್ಮ ಮನದಾಳವನ್ನು ಹಂಚಿಕೊಳ್ಳುವುದು ಅದ್ಭುತ- ಕಂಗನಾ ರಣಾವತ್
Advertisement