ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಗೊಂಡು 6 ಮಂದಿ ನಾಪತ್ತೆಯಾಗಿದ್ದಾರೆ.
ಪಣಂಬೂರಿನಿಂದ ಹಲವು ನಾಟಿಕಲ್ ದೂರದಲ್ಲಿ ಮಂಗಳೂರಿನ ಬೋಳಾರದ ಶ್ರೀರಕ್ಷಾ ಹೆಸರಿನ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಬೋಟ್ ನಲ್ಲಿ 22 ಮಂದಿ ಇದ್ದು, ಇದರಲ್ಲಿ 6 ಮಂದಿ ನಾಪತ್ತೆಯಾಗಿದ್ದಾರೆ.
ನಿನ್ನೆ ಸಂಜೆ 6.30ರ ಸುಮಾರಿಗೆ ಹಿಡಿದ ಮೀನನ್ನು ತುಂಬಿಸುವ ವೇಳೆ ಭಾರೀ ಅಲೆಗಳ ಹೊಡೆತಕ್ಕೆ ಬೋಟ್ ಪಲ್ಟಿಯಾಗಿದೆ. ಬೋಟ್ ನಲ್ಲಿದ್ದವರು ಉಳ್ಳಾಲ, ಮಂಗಳೂರು ಹಾಗೂ ತಮಿಳುನಾಡು ಮೂಲದ ಮೀನುಗಾರರು ಎಂಬ ಮಾಹಿತಿ ಲಭಿಸಿದೆ.
ದುರಂತದ ಮಾಹಿತಿ ಅರಿತ ಕೂಡಲೇ ನಾಪತ್ತೆಯಾದ ಮೀನುಗಾರರ ರಕ್ಷಣೆಗೆ ಹಲವು ಬೋಟ್ ಗಳು ಸ್ಥಳಕ್ಕೆ ದೌಡಾಯಿಸಿದವು. ಅಲ್ಲದೆ ಮೀನುಗಾರರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿತ್ತು.